ಅಮೆರಿಕದ ಖಾಸಗಿ ಬಾಹ್ಯಾಕಾಶ ಸಂಸ್ಥೆ ಸ್ಪೇಸ್‌ಎಕ್ಸ್‌ನಿರ್ಮಾಣ ಮಾಡಿದ್ದ ವಿಶ್ವದ ಅತ್ಯಂತ ಬೃಹತ್’ಸ್ಟಾರ್‌ಶಿಪ್‌ರಾಕೆಟ್‌ಪರೀಕ್ಷಾರ್ಥ ಉಡ್ಡಯನ ವೇಳೆ ಸ್ಫೋಟಗೊಂಡಿದೆ. ಗುರುವಾರ ಮುಂಜಾನೆ ಸ್ಥಳೀಯ ಕಾಲಮಾನ 8.33 ಗಂಟೆಗೆ ಟೆಕ್ಸಾಸ್‌ನ ಬೊಕಾಚಿಕಾದಲ್ಲಿರುವ ಸ್ಪೇಸ್‌ಎಕ್ಸ್‌ನ ಖಾಸಗಿ ಉಡಾವಣಾ ಕೇಂದ್ರದಿಂದ ಉಡ್ಡಯನಗೊಂಡ ರಾಕೆಟ್, ಸುಮಾರು 3 ನಿಮಿಷಗಳ ಬಳಿಕ ಸ್ಫೋಟಗೊಂಡಿದೆ. ಇದೊಂದು ಪರೀಕ್ಷಾ ಉಡ್ಡಯನವಾಗಿದ್ದು, ಯಾವುದೇ ಗಗನಯಾತ್ರಿಗಳನ್ನು ಯಾನದಲ್ಲಿ ಬಳಸಲಾಗಿರಲಿಲ್ಲ ಎಂದು ಕಂಪನಿ ಹೇಳಿದೆ. ಇದು ಭಾರಿ ಶಕ್ತಿಶಾಲಿ ರಾಕೆಟ್‌ಆಗಿದ್ದು, ಸುಮಾರು 400 ಅಡಿ ಎತ್ತರವಾಗಿದೆ. 250 ಟನ್‌ತೂಕ ಹೊತ್ತೊಯ್ಯಬಲ್ಲದು. ಕನಿಷ್ಠ 100 ಜನರನ್ನು ಒಮ್ಮೆಗೆ ಮಂಗಳ ಗ್ರಹಕ್ಕೆ ಕರೆದೊಯ್ಯಬಲ್ಲದು. ಚಂದ್ರ, ಮಂಗಳಗ್ರಹದತ್ತ ಮಾನವ ಯಾನದ ಉದ್ದೇಶದಿಂದ ಈ ರಾಕೆಟ್‌ಅನ್ನು ತಯಾರಿಸಲಾಗಿತ್ತು