ಉತ್ತರ ಪ್ರದೇಶ ಬಿಜೆಪಿ ನಾಯಕನ ಪುತ್ರನಿಗೆ ಸೇರಿದ್ದ ಹೊಟೆಲ್‌ನಲ್ಲಿ ರೆಸೆಪ್ಶನಿಸ್ಟ್ ಆಗಿದ್ದ 19ರ ಯುವತಿಯನ್ನು ಹತ್ಯೆ ಮಾಡಿದ ಆರೋಪದಡಿ ಬಿಜೆಪಿ ಮುಖಂಡನ ಪುತ್ರ ಪುಲ್ಕಿತ್ ಆರ್ಯನನ್ನು ಪೊಲೀಸರು ಆರೆಸ್ಟ್ ಮಾಡಿದ್ದಾರೆ. ಈ ಘಟನೆ ರಾಷ್ಟ್ರಮಟ್ಟದಲ್ಲಿ ಸದ್ದು ಮಾಡುತ್ತಿದ್ದಂತೆ ಬಿಜೆಪಿ ಮುಖಂಡನ ಪುತ್ರ ಪುಲ್ಕಿತ್ ಆರ್ಯಗೆ ಸೇರಿದ್ದ ಹೊಟೆಲ್ ಹಾಗೂ ರೆಸಾರ್ಟ್ ಧ್ವಂಸ ಮಾಡಲು ಸಿಎಂ ಆದೇಶಿಸಿದ್ದಾರೆ. ಯುವತಿ ಹತ್ಯೆ ಪ್ರಕರಣ ಉತ್ತರಖಂಡದಲ್ಲಿ ಭಾರಿ ಪ್ರತಿಭಟನೆಗೆ ಕಾರಣಾಗಿದೆ.