ಏಪ್ರಿಲ್ 15 ರಂದು ರಾತ್ರಿ ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ವೈದ್ಯಕೀಯ ತಪಾಸಣೆಗೆ ಇಬ್ಬರನ್ನು ಪೊಲೀಸರು ಕರೆದೊಯ್ಯುತ್ತಿದ್ದಾಗ ಮೂವರು ಪತ್ರಕರ್ತರ ಸೋಗಿನಲ್ಲಿ ಬಂದು ಗುಂಡು ಹಾರಿಸಿ ಹತ್ಯೆ ಮಾಡಿದ್ದರು. ಇನ್ನು ಈ ಘಟನೆ ಬಳಿಕ ಉತ್ತರ ಪ್ರದೇಶದಲ್ಲಿ ತೀವ್ರ ಸಂಚಲನ ಸೃಷ್ಟಿಯಾಗಿತ್ತು. ಇಬ್ಬರನ್ನೂ ರಸ್ತೆಯಲ್ಲಿ ಬಹಿರಂಗವಾಗಿ ಕರೆದೊಯ್ದಿದ್ದು ಏಕೆ? ಮಾಧ್ಯಮಗಳ ಮುಂದೆ ನಿಲ್ಲಿಸಿದ್ದೇಕೆ? ಅಲ್ಲದೆ ಯೋಗಿ ಆದಿತ್ಯನಾಥ್ ಸರ್ಕಾರದಲ್ಲಿ ಏನಾಗುತ್ತಿದೆ? ಎಂಬ ಪ್ರಶ್ನೆಯೂ ಭುಗಿಲೇಳುವಂತೆ ಮಾಡಿತ್ತು. ಇದೀಗ ಸುಪ್ರೀಂಕೋರ್ಟ್ ಕೂಡ ಅದೇ ರೀತಿ ಪ್ರಶ್ನೆ ಮಾಡಿದ್ದು, ಇಬ್ಬರ ಹತ್ಯೆಯ ಬಗ್ಗೆ ಸಂಪೂರ್ಣ ವರದಿ ನೀಡಲು3 ವಾರ ಸೂಚಿಸಿದೆ.ಹಾಗೇ ಅತೀಕ್ ಅಹ್ಮದ್ ಪುತ್ರ ಅಸದ್ ಎನ್‌ಕೌಂಟರ್‌ನ ಸ್ಥಿತಿಗತಿ ವರದಿಯನ್ನು ಕೂಡ ಸುಪ್ರೀಂಕೋರ್ಟ್ ಕೇಳಿದೆ.