ಎರಡು ದೊಡ್ಡ ಮತ್ತು ವಿಶ್ವದ ಅತ್ಯಂತ ಹಳೆಯ ಪ್ರಜಾಪ್ರಭುತ್ವಗಳೆನಿಸಿದ ಅಮೆರಿಕಾ ಹಾಗೂ ಭಾರತ ಕಾರ್ಯತಂತ್ರದ ತಾಂತ್ರಿಕ ಪಾಲುದಾರಿಕೆಯನ್ನು ಉನ್ನತೀಕರಿಸಲು ಪಾಲುದಾರಿಕೆಯನ್ನು ಹೆಚ್ಚಿಸಿರುವುದು ಭವಿಷ್ಯದ ತಂತ್ರಜ್ಞಾನ ಹಾಗೂ ಆವಿಷ್ಕಾರದ ವಿಚಾರದಲ್ಲಿ ಉತ್ತಮ ನಡೆಯಾಗಿದೆ. ಯುವ ಭಾರತೀಯರಿಗಾಗಿ ಪ್ರಧಾನಿ ನರೇಂದ್ರ ಮೋದಿಯವರ ದೂರದೃಷ್ಟಿತ್ವದ ಪರಿಣಾಮ ಇದಾಗಿದ್ದು, ಇದೊಂದು ದೊಡ್ಡ ಮಟ್ಟದ ಮೈಲಿಗಲ್ಲು ಎಂದು ಕೇಂದ್ರ ವಾಣಿಜ್ಯೋದ್ಯಮ, ಕೌಶಲ್ಯ ಅಭಿವೃದ್ಧಿ, ಎಲೆಕ್ಟ್ರಾನಿಕ್ಸ್ ಮತ್ತು ತಂತ್ರಜ್ಞಾನ ರಾಜ್ಯ ಸಚಿವರಾದ ರಾಜೀವ್ ಚಂದ್ರಶೇಖರ್ ಟ್ವಿಟ್ ಮಾಡಿದ್ದಾರೆ.