ಉರಿಗೌಡ, ನಂಜೇಗೌಡ ಐತಿಹಾಸಿಕ ಪಾತ್ರಗಳು, ಅವರಿಬ್ಬರೂ ಟಿಪ್ಪು‌ವನ್ನ ಕೊಂದಿರೋದು ಸತ್ಯ- ಸಿ.ಟಿ ರವಿ

ಧಾರವಾಡ ಜಿಲ್ಲೆಯ ಕುಂದಗೋಳದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಅವರು, ಉರಿಗೌಡ, ನಂಜೇಗೌಡ ಐತಿಹಾಸಿಕ ಪಾತ್ರಗಳು, ಅವರಿಬ್ಬರೂ ಟಿಪ್ಪು‌ವನ್ನ ಕೊಂದಿರೋದು ಸತ್ಯ ಟಿಪ್ಪು ಸುಲ್ತಾನ್ ಬದುಕಿದ್ದರೆ ಹಾಸನವನ್ನ ʻಕೈಮಾಬಾದ್ʼ ಅಂತಾ ಕರೆಯುತ್ತಿದ್ದ, ಕುಮಾರಸ್ವಾಮಿಗೆ ಹಾಸನವನ್ನ ಆ ರೀತಿಯಲ್ಲಿ ಕರೆಸಿಕೊಳ್ಳೋಕೆ ಇಷ್ಟ ಇತ್ತು ಅನ್ನಿಸುತ್ತೆ ಕುಮಾರಸ್ವಾಮಿಯವರಿಗೆ ಹಾಸನ ಬೇಕೋ? ಕೈಮಾಬಾದ್ ಬೇಕೋ? ಅವರೇ ತಿರ್ಮಾನಿಸಲಿ ಎಂದು ವ್ಯಂಗ್ಯವಾಡಿದ್ದಾರೆ.

Leave a Reply

Your email address will not be published. Required fields are marked *