ದಕ್ಷಿಣ ಕೊರಿಯಾ ಮತ್ತು ಅಮೆರಿಕಗೆ ಪಾಠ ಕಲಿಸುವ ಭರದಲ್ಲಿ ಮತ್ತೊಂದು ಮಹಾ ಎಡವಟ್ಟು ಮಾಡಿದ್ದಾನೆ ಸರ್ವಾಧಿಕಾರಿ. ಈಗಾಗಲೇ ಉತ್ತರ ಕೊರಿಯಾ ಬಳಿ 40ಕ್ಕೂ ಹೆಚ್ಚು ಪರಮಾಣು ಶಸ್ತ್ರಾಸ್ತ್ರಗಳಿವೆ. ಇಷ್ಟು ಸಾಲದು ಎಂಬಂತೆ ಪ್ರತಿವರ್ಷ ಸುಮಾರು 6ರಿಂದ 7 ಪರಮಾಣು ಪರೀಕ್ಷೆಗಳನ್ನು ಉತ್ತರ ಕೊರಿಯಾ ನಡೆಸುತ್ತಲೇ ಬಂದಿದೆ. ಇದೀಗ ಅಮೆರಿಕದ ಮೇಲಿನ ಸಿಟ್ಟು ಮತ್ತು ದಕ್ಷಿಣ ಕೊರಿಯಾ ಮೇಲಿನ ಕೋಪಕ್ಕೆ ಮತ್ತಷ್ಟು ಪರಮಾಣು ಶಸ್ತ್ರಾಸ್ತ್ರ ಪರೀಕ್ಷೆಗೆ ಮುಂದಾಗಿದ್ದಾನೆ ಸರ್ವಾಧಿಕಾರಿ ಕಿಮ್ ಜಾಂಗ್ ಉನ್. ಕೊರಿಯಾ ಮಿಲಿಟರಿ ಅಧಿಕಾರಿಗಳ ಉನ್ನತ ಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ್ದಾನೆ