ರಾಯಚೂರಿನಲ್ಲಿ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ವೇಳೆ ಮಾತನಾಡಿದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಅವರು, ಊರಲ್ಲಿರುವ ಮಕ್ಕಳೆಲ್ಲ ನನ್ನವೇ ಅಂದ್ರೆ ಯಾರಾದ್ರೂ ಕಾಲಲ್ಲಿ ಇರೋದನ್ನ ಕೈಗೆ ತಗೋತಾರೆ. ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಗೆ ಕಾಂಗ್ರೆಸ್‌ನಿಂದ ಒಂದೇ ಒಂದು ರೂಪಾಯಿ ಕೊಡುಗೆಯಿಲ್ಲ, ಇದ್ದರೆ ತೋರಿಸಲಿ? ಕಾಂಗ್ರೆಸ್ ಸುಳ್ಳು ಹೇಳುತ್ತೋ ಸತ್ಯ ಹೇಳುತ್ತೋ ಅನ್ನೋದು ಜನರಿಗೆ ಗೊತ್ತಾಗುತ್ತೆ ಎಂದು ಸವಾಲ್ ಹಾಕಿದ್ದಾರೆ. ಕಾಂಗ್ರೆಸ್ ತನ್ನ ಅವಧಿಯಲ್ಲಿ ಹಣ ಬಿಡುಗಡೆ ಮಾಡಿದ್ರೆ, ಟೆಂಡರ್ ಕರೆದಿದ್ರೆ, ಮಂಜೂರಾತಿ ಪತ್ರ ಇದ್ದರೆ ಬಿಡುಗಡೆ ಮಾಡಲಿ. ಕಾಂಗ್ರೆಸ್ ಜನ್ಮದಿಂದಲೂ ಮೂಗಿಗೆ ತುಪ್ಪ ಸವರೊ ಕೆಲಸ ಮಾಡಿಕೊಂಡು ಬಂದಿದೆ. ಎಂದು ಕಿಡಿ ಕಾರಿದ್ದಾರೆ.