ಕರ್ನಾಟಕ ಹೈಕೋರ್ಟ್ಎಸಿಬಿ ರಚನೆಯನ್ನು ರದ್ದು ಮಾಡಿ ಆದೇಶವನ್ನು ಹೊರಡಿಸಿದೆ. ಹೈಕೋರ್ಟ್ಆದೇಶವನ್ನು ಕಾದು ನೋಡುವ ತಂತ್ರ ರಾಜ್ಯ ಸಚಿವ ಸಂಪುಟದಲ್ಲಿ ತೀರ್ಮಾನಿಸಿದೆ. ಹೈಕೋರ್ಟ್ಆದೇಶ ಪ್ರತಿಯನ್ನು ಸಂಪೂರ್ಣ ಓದಿ ಸಲಹೆಗಾರರು ನೀಡುವ ಸಲಹೆ ಮೇಲೆ ಮುಂದಿನ ತೀರ್ಮಾನ ಕೈಗೊಳ್ಳಲು ಸಚಿವ ಸಂಪುಟದಲ್ಲಿ ಅಸ್ತು ಎನ್ನಲಾಗಿದೆ.
ನ್ನು ಆದೇಶವನ್ನು ಪ್ರಶ್ನಿಸಬೇಕೆಂದರೆ ಸರ್ಕಾರವೇ ಮೇಲ್ಮನವಿಯನ್ನು ಸಲ್ಲಿಸಬೇಕು. ಇಲ್ಲವೇ ಸುಪ್ರೀಂ ಮೊರೆಯನ್ನು ಹೋಗಬೇಕು. ಆದರೆ ಬಿಜೆಪಿ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಎಸಿಬಿ ರದ್ದು ಮಾಡಿ ಲೋಕಾಯುಕ್ತ ಬಲಪಡಿಸುವ ವಾಗ್ದಾನವನ್ನು ಮಾಡಿತ್ತು. ಇದೀಗ ಇಕ್ಕಟ್ಟಿಗೆ ಸಿಲುಕಿರೋ ಸರ್ಕಾರ ಕಾದು ನೋಡುವ ತಂತ್ರಕ್ಕೆ ಸಂಪುಟ ಸಭೆಯಲ್ಲಿ ತೀರ್ಮಾನಿಸಿದೆ.