ಏಕನಾಥ್ ಶಿಂಧೆ ಬಣದ ಅರ್ಜಿಯನ್ನು ಈಗಲೇ ನಿರ್ಧರಿಸಬೇಡಿ ಎಂದ ಸುಪ್ರೀಂಕೋರ್ಟ್: ಉದ್ಧವ್ ಠಾಕ್ರೆ ರಿಲೀಫ್..!

ಶಿವಸೇನೆ ಪಕ್ಷ ಯಾರಿಗೆ ಸೇರಿದ್ದು ಎಂಬ ಬಗ್ಗೆ ಸುಪ್ರೀಂಕೋರ್ಟ್ನಲ್ಲಿ ವಿಚಾರಣೆ ನಡೆಯುತ್ತಿದೆ. ಈ ಸಂಬಂಧ ಏಕನಾಥ್ ಶಿಂಧೆ ಅವರು ನೀಡಿರುವ ಅರ್ಜಿಯನ್ನು ಈಗಲೇ ಪರಿಗಣಿಸಬೇಡಿ ಎಂದು ಸರ್ವೋಚ್ಛ ನ್ಯಾಯಾಲಯ ತಿಳಿಸಿದೆ.
ಮಹಾರಾಷ್ಟ್ರ ರಾಜಕೀಯದಲ್ಲಿ ಸದ್ಯ ಹೆಚ್ಚು ಚರ್ಚೆಗೆ ಗ್ರಾಸವಾಗಿರುವುದು ಶಿವಸೇನೆ ನಡುವಿನ ಗುದ್ದಾಟ. ಏಕನಾಥ್ ಶಿಂದೆ ಮತ್ತು ಉದ್ಧವ್ ಠಾಕ್ರೆ ನಡುವೆ ಪಕ್ಷದ ಹಿಡಿತಕ್ಕಾಗಿ ಗುದ್ದಾಟ ಮುಂದುವರಿದಿದ್ದು, ಈ ಸಂಬಂಧ ಸುಪ್ರೀಂಕೋರ್ಟ್ನಲ್ಲಿ ಸಹ ವಿಚಾರಣೆ ನಡೆಯುತ್ತಿದೆ. ಇನ್ನು, ಸುಪ್ರೀಂಕೋರ್ಟ್ ವಿಚಾರಣೆ ವೇಳೆ ಏಕನಾಥ್ ಶಿಂಧೆ ಬಣದ ಅರ್ಜಿ ಪರಿಗಣಿಸಿ ಶಿವಸೇನೆ ಪಕ್ಷದ ಅಧಿಕಾರ ಕುರಿತು ನಿರ್ಧರಿಸಬೇಡಿ ಎಂದು ಕೇಂದ್ರ ಚುನಾವಣಾ ಆಯೋಗಕ್ಕೆ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ಸೂಚನೆ ನೀಡಿದ್ದಾರೆ. ಅಲ್ಲದೆ, ವಿಚಾರಣೆಯನ್ನು ಮತ್ತೆ ಆಗಸ್ಟ್ 8 ಕ್ಕೆ ಮುಂದೂಡಿದೆ ದೇಶದ ಅತ್ಯುನ್ನತ ನ್ಯಾಯಾಲಯ. ಉದ್ಧವ್ ಠಾಕ್ರೆ ಬಣ, ಶಿಂಧೆ ಬಣದ ಅರ್ಜಿಗೆ ಉತ್ತರಿಸಲು ಸಮಯವಕಾಶ ಕೋರಿದೆ. ಈ ಹಿನ್ನೆಲೆ ವಿಚಾರಣೆಯನ್ನು ಮುಂದೂಡಿಕೆ ಮಾಡುತ್ತಿದ್ದೇವೆ ಎಂದು ಮುಖ್ಯ ನ್ಯಾಯಮೂರ್ತಿ ಎನ್. ವಿ. ರಮಣ ಅವರ ಪೀಠ ತಿಳಿಸಿದೆ.

Leave a Reply

Your email address will not be published. Required fields are marked *