ಫ್ರಾನ್ಸ್‌ನ ದೊಡ್ಡ ಸಿಮೆಂಟ್‌ತಯಾರಕ ಕಂಪನಿಯಾದ ‘ಲಫಾರ್ಗೆ’, ಉಗ್ರ ಸಂಘಟನೆಗಳಿಗೆ ಹಲವು ಭಯೋತ್ಪಾದಕ ಸಂಘಟನೆಗಳಿಗೆ ಹಣಕಾಸು ನೆರವು ನೀಡಿದ್ದಾಗಿ ಅಮೆರಿಕ ಕೋರ್ಟ್ ಮುಂದೆ ತಪ್ಪೊಪ್ಪಿಕೊಂಡಿದೆ. ಅಮೆರಿಕದಲ್ಲಿ ಕಂಪನಿಯೊಂದು ಉಗ್ರರಿಗೆ ನೆರವು ನೀಡುತ್ತಿರುವುದಾಗಿ ಒಪ್ಪಿಕೊಂಡಿದ್ದು ಇದೇ ಮೊದಲು ಎಂದು ವರದಿಯಾಗಿದೆ. ಪ್ರತಿ ತಿಂಗಳು 816,000 ಡಾಲರ್‌ದೇಣಿಗೆ ನೀಡಲಾಗಿದೆ ಮತ್ತು ಐಸಿಸ್‌ನಿಯಂತ್ರಣಕ್ಕೆ ಒಳಗಾಗಿದ್ದ ಪೂರೈಕೆದಾರರಿಂದ ಕಚ್ಚಾ ವಸ್ತುಗಳನ್ನು ಖರೀದಿಸಲು 3,447,528 ಡಾಲರ್‌ಪಾವತಿಸಲಾಗಿದೆ ಎಂದು ಹೇಳಿದೆ. ತನ್ನ ತಪ್ಪನ್ನು ಒಪ್ಪಿಕೊಂಡ ಹಿನ್ನೆಲೆಯಲ್ಲಿ ಒಟ್ಟಾರೆ 6300 ಕೋಟಿ ರೂ. ದಂಡವಾಗಿ ಕಟ್ಟಲು ಕಂಪನಿ ಸಮ್ಮತಿಸಿದೆ. 2015 ರಲ್ಲಿ ಲಫಾರ್ಗೆ ಕಂಪನಿಯನ್ನು ಖರೀದಿಸಿದ ಸ್ವಿಜರ್‌ಲ್ಯಾಂಡ್ ಹೋಲ್ಸಿಮ್‌ಗ್ರೂಪ್‌ಪ್ರತಿಕ್ರಿಯಿಸಿ, ಈ ಹಣದ ವ್ಯವಹಾರದಲ್ಲಿ ನಾವು ಭಾಗಿಯಾಗಿಲ್ಲ. ನಮ್ಮ ಗಮನಕ್ಕೆ ಬಾರದೇ ಲಫಾರ್ಗೆ ಈ ವ್ಯವಹಾರ ನಡೆಸಿದೆ. ಈ ತನಿಖೆಗೆ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದೆ.