ಪ್ರಧಾನಿ ನರೇಂದ್ರ ಮೋದಿ ಅವರು ಇಂದು 72ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಪ್ರಧಾನಿ ಮೋದಿಗೆ ಅನೇಕ ಗಣ್ಯರು ದೇಶ ವಿದೇಶಗಳಿಂದ ಶುಭಾಶಯ ಬರುತ್ತಿದೆ. ಈ ಪೈಕಿ ಬಾಲಿವುಡ್ ಸ್ಟಾರ್ ಕಿಂಗ್ ಖಾನ್ ಶಾರುಖ್ ಖಾನ್ ಪ್ರಧಾನಿ ಮೋದಿಗೆ ‘ನಮ್ಮ ದೇಶದ ಕಲ್ಯಾಣಕ್ಕಾಗಿ ನಿಮ್ಮ ಬದ್ಧತೆಗೆ ಇಡೀ ದೇಶದ ಜನತೆ ನಿಮ್ಮನ್ನು ಪ್ರಶಂಸಿಸುತ್ತಿದೆ. ನಿಮ್ಮ ಎಲ್ಲಾ ಗುರಿಗಳನ್ನು ಸಾಧಿಸಲು ಹೆಚ್ಚು ಶಕ್ತಿ ಮತ್ತು ಆರೋಗ್ಯ ಸಿಗಲಿ ಎಂದು ವಿಶ್ ಮಾಡಿ ಒಂದು ದಿನ ರಜೆ ಹಾಕಿ ಹುಟ್ಟುಹಬ್ಬ ಆನಂದಿಸಿ ಎಂದು ಮನವಿ ಮಾಡಿದ್ದಾರೆ.