ಕರ್ನಾಟಕ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ತಮ್ಮ ಪಕ್ಷದ ಕಾರ್ಯಕರ್ತರಿಗೆ ರಸ್ತೆ ಮತ್ತು ಚರಂಡಿಯಂತಹ ‘ಸಣ್ಣ ಸಮಸ್ಯೆಗಳ’ ಬಗ್ಗೆ ಮಾತನಾಡಬೇಡಿ’ಲವ್ ಜಿಹಾದ್’ ನಂತಹ ದೊಡ್ಡ ವಿಷಯಗಳ ಬಗ್ಗೆ ಮಾತನಾಡಿ ಎಂದ ಹೇಳಿಕೆ ಹೊಸ ವಿವಾದವನ್ನು ಹುಟ್ಟುಹಾಕಿದ್ದಾರೆ. ಈ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಎಂಎಲ್‌ಸಿ ವಿಶ್ವನಾಥ್ ಅವರು, ನಿಮಗೆ ಇದು ಸಣ್ಣ ಪುಟ್ಟ ವಿಷಯವೇ ಆದರೆ ಕೇರಿಯಲ್ಲಿ ಬದುಕುವವರ ಕಥೆ ಏನು? ಕೇರಿಯಲ್ಲಿ ಬದುಕುವ ನಮಗೆ ನಮ್ಮ ಮೂಲಭೂತ ಸೌಲಭ್ಯ ಮುಖ್ಯ. ನಮ್ಮ ಚರಂಡಿ, ರಸ್ತೆ, ಮನೆ ಏನಾಯ್ತು? ನಮ್ಮ ಕೇರಿ ನೀರೇನಾಯ್ತು? ಇದುವೇ ನಮ್ಮ ಸಮಸ್ಯೆ. ಅದು ಬಿಟ್ಟು ಲವ್ ಜಿಹಾದ್ ಹೆಸರಿನಲ್ಲಿ ನೀವು ಜನರನ್ನು ಹೇಗೆ ದಿಕ್ಕು ತಪ್ಪಿಸುತ್ತೀರಿ ನೋಡಿ ಎಂದು ಕಿಡಿಕಾರಿದರು. ಒಂದು ರಾಜ್ಯ ಆಳುವ ಪಕ್ಷದ ಅಧ್ಯಕ್ಷ ಹೀಗೆ ಅರ್ಥವಿಲ್ಲದ ಮಾತುಗಳನ್ನಾಡಬಾರದು. ಛೀ.. ಥೂ… ಎಂದು ವಿಶ್ವನಾಥ್ ಅಸಮಾಧಾನ ವ್ಯಕ್ತಪಡಿಸಿದರು.