ಸೋಮವಾರವಷ್ಟೇ ಉಕ್ರೇನ್‌ರಾಜಧಾನಿ ಕೀವ್, ಖಾರ್ಕೀವ್‌ಸೇರಿದಂತೆ ಹಲವು ನಗರಗಳ ಮೇಲೆ 50ಕ್ಕೂ ಹೆಚ್ಚು ಕ್ಷಿಪಣಿಗಳಿಂದ ದಾಳಿ ನಡೆಸಿದ್ದ ರಷ್ಯನ್ನರ ಮೇಲೆ ಉಕ್ರೇನಿ ಪಡೆಗಳು ಮುಗಿಬಿದ್ದಿದ್ದು, ಒಂದೇ ದಿನದಲ್ಲಿ 1000ಕ್ಕೂ ಹೆಚ್ಚು ರಷ್ಯಾ ಯೋಧರನ್ನು ಹತ್ಯೆಗೈದಿವೆ. ಈ ಕುರಿತು ಮಾಹಿತಿ ನೀಡಿರುವ ಉಕ್ರೇನ್‌ಸೇನೆ ಕಳೆದ 24 ಗಂಟೆ ನಮ್ಮ ಪಾಲಿಗೆ ಅತ್ಯಂತ ಯಶಸ್ಸಿನ ಸಮಯ. ನಾವು ಈ ಅವಧಿಯಲ್ಲಿ 1000ಕ್ಕೂ ಹೆಚ್ಚು ರಷ್ಯಾ ಸೈನಿಕರನ್ನು ಬಲಿಪಡೆದಿದ್ದೇವೆ. ಇದರೊಂದಿಗೆ ಕಳೆದ 8 ತಿಂಗಳಲ್ಲಿ ಯುದ್ಧಕ್ಕೆ ಬಲಿಯಾದ ರಷ್ಯಾ ಯೋಧರ ಸಂಖ್ಯೆ 71,200ಕ್ಕೆ ತಲುಪಿದೆ ಎಂದು ಹೇಳಿದೆ. ಆದರೆ ಯಾವ ಪ್ರದೇಶದಲ್ಲಿ ಈ ದಾಳಿ ನಡೆಸಲಾಗಿದೆ ಎಂದು ಸೇನೆ ಮಾಹಿತಿ ನೀಡಿಲ್ಲ.