ಅಗ್ರಿಗೇಟರ್ಸ್‌ಕಂಪನಿಗಳಾದ ಒಲಾ, ಉಬರ್‌ಹಾಗೂ ರಾಪಿಡೋ ಅಟೋಗಳಿಗೆ ನೂತನ ದರ ಫಿಕ್ಸ್‌ಮಾಡಿ ಸಾರಿಗೆ ಇಲಾಖೆ ಆದೇಶ ಹೊರಡಿಸಿದೆ. ಹೈಕೋರ್ಟ್‌ಸೂಚನೆಯಂತೆ ಶುಕ್ರವಾರ ನಡೆದ ಸಭೆಯಲ್ಲಿ ಸಾರಿಗೆ ಇಲಾಖೆ ದರವನ್ನು ಫಿಕ್ಸ್‌ಮಾಡಿದೆ. ಮೊದಲ 2 ಕಿ.ಮೀಗೆ 30 ರಿಂದ 33 ರೂ ಏರಿಕೆಯಾಗಲಿದೆ. ಜಿಎಸ್‌ಟಿ ಸೇರ್ಪಡಿಸಿ ಶೇ 5% ರಷ್ಟು ಮಾತ್ರ ದರ ಏರಿಸಲು ಸಾರಿಗೆ ಇಲಾಖೆ ನಿರ್ಧರಿಸಿದೆ. ಪ್ರಯಾಣಿಕರಿಗೆ ಹೊರೆಯಾಗದಂತೆ ದರ ನಿಗದಿ ಮಾಡಿದ್ದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ತಕ್ಷಣದಿಂದಲೆ ಹೊಸ ಪರಿಷ್ಕೃತ ದರ ಜಾರಿಗೊಳಿಸುವಂತೆ ಸರ್ಕಾರ ಸೂಚನೆ ನೀಡಿದ್ದಾರೆ. ಈಗಾಗಲೆ ದರ ನಿಗದಿ ಪಟ್ಟಿಯನ್ನು ಕೋರ್ಟ್ ಗೆ ಸಲ್ಲಿಕೆ ಮಾಡಿದ್ದಾಗಿ ಅಧಿಕಾರಿಗಳು ತಿಳಿಸಿದ್ದಾರೆ.