ಓಲಾ, ಉಬರ್ ಮತ್ತು ರಾಪಿಡೊ ಸೇವೆಗಳನ್ನು ಅಕ್ಟೋಬರ್ 12 ರ ಬುಧವಾರದಿಂದ ಸ್ಥಗಿತಗೊಳಿಸುವಂತೆ ಮಂಗಳವಾರ ನಡೆದ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಕರ್ನಾಟಕ ಸಾರಿಗೆ ಇಲಾಖೆಯ ಟಿಎಚ್‌ಎಂ ಕುಮಾರ್ ತಿಳಿಸಿದ್ದಾರೆ. ಓಲಾ, ಉಬರ್ ಮತ್ತು ರಾಪಿಡೊ ಪ್ರತಿನಿಧಿಗಳ ಜೊತೆಗೆ ನಡೆದ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಾರಿಗೆ ಆಯುಕ್ತ ಟಿಎಚ್‌ಎಂ ಕುಮಾರ್, “ಸರಕು ಮತ್ತು ಸೇವಾ ತೆರಿಗೆ ಯೊಂದಿಗೆ ಸರ್ಕಾರದಿಂದ ಅಗ್ರಿಗೇಟರ್‌ಗಳ ಪ್ರಸ್ತಾವನೆಯನ್ನು ಅನುಮೋದನೆಗಾಗಿ ರಾಜ್ಯ ಸರ್ಕಾರಕ್ಕೆಕಳುಹಿಸಲಾಗುವುದು” ಎಂದು ಹೇಳಿದರು ಸರ್ಕಾರದ ನಿಯಮಗಳ ಪ್ರಕಾರ, ಎರಡು ಕಿಲೋಮೀಟರ್‌ಗಳಿಗೆ ಆಟೋರಿಕ್ಷಾಗಳಿಗೆ 30 ರೂಪಾಯಿ ಮೂಲ ದರವನ್ನು ನಿಗದಿಪಡಿಸಲಾಗಿದೆ, ನಂತರ ಪ್ರತಿ ಕಿಲೋಮೀಟರ್‌ಗೆ ರೂ 15 ಶುಲ್ಕ ವಿಧಿಸಲಾಗುತ್ತದೆ.