ಸಂಸದ ಡಿ.ಕೆ. ಸುರೇಶ್‌ಅವರು ರಾಜಕೀಯ ನಿವೃತ್ತಿ ಪಡೆಯಲಿದ್ದಾರೆ ಎಂಬ ಕುರಿತು ಮಾತನಾಡಿದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶೀ ಸಿ.ಟಿ. ರವಿ ಅವರು, ಕನಕಪುರದ ಗಂಡು ಸಂಸದ ಡಿ.ಕೆ. ಸುರೇಶ್‌ಅವರು ರಾಜಕೀಯ ನಿವೃತ್ತಿ ತಗೋಬಾರದು. ಇಂಥವನ್ನೆಲ್ಲ ಅವರು ಎದುರಿಸಬೇಕು. ಡಿಕೆ ಸುರೇಶ್ ಕನಕಪುರದ ಗಂಡು ಯಾವುದಕ್ಕೂ ಹೆದರಿಕೂರಬಾರದು. ಡಿಕೆ ಸುರೇಶ್ ಯಾಕೆ ನಿವೃತ್ತಿ ತಗೊತಾರೆ..? ಅವರು ಕನಕಪುರದ ಗಂಡು. ರಾಜಕೀಯ ಎಲ್ಲವನ್ನೂ ತಿಳಿದವರು. ಕೆಲವರು 5 ವರ್ಷ ಸಿದ್ದರಾಮಯ್ಯ ಸಿಎಂ ಅಂತಿದ್ದಾರೆ. ಇನ್ನೂ ಸ್ವಲ್ಪ ದಿನಗಳಲ್ಲೇ ಆಡಳಿತ ಪಕ್ಷದಲ್ಲೇ, ವಿರೋಧ ಪಕ್ಷವಾಗುತ್ತಾರೆ. ಈ ಹಿಂದೆ ಜೆಡಿಎಸ್ ನಲ್ಲಿ ಸಿದ್ದರಾಮಯ್ಯ ಡಿಸಿಎಂ ಆಗಿ ರೆಬೆಲ್ ಆಗಿರಲಿಲ್ಲವಾ..? ಹಾಗೇ ಕಾಂಗ್ರೆಸ್ ನಲ್ಲೇ ಕೆಲವರು ರೆಬೆಲ್ ಆಗ್ತಾರೆ. ಪರೋಕ್ಷವಾಗಿ ಶಿವಕುಮಾರ್ ಸಿಎಂ ಸ್ಥಾನ ಸಿಗದೇ ರೆಬೆಲ್ ಆಗಿ ಆಡಳಿತ ಪಕ್ಷದಿಂದ ಹೊರ ಬಂದು ವಿಪಕ್ಷವಾಗ್ತಾರೆ ಎಂದರು.