ನೆರೆಯ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಕರ್ನಾಟಕ ವಿರುದ್ಧ ಹೇಳಿಕೆ ನೀಡಿದ ಎನ್‌ಸಿಪಿ ಶಾಸಕ ಜಯಂತ್‌ಪಾಟೀಲ್ ಕರ್ನಾಟಕಕ್ಕೆ ಲಭ್ಯವಾಗಬೇಕಿರುವ ನೀರನ್ನು ನಿಲ್ಲಿಸಲು ಅವನ ಅಪ್ಪನಿಂದಲೂ ಸಾಧ್ಯವಿಲ್ಲ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ತಿರುಗೇಟು ನೀಡಿದ್ದಾರೆ. ಅಣೆಕಟ್ಟು ಎತ್ತರ ಹೆಚ್ಚಿಸಿ, ಕರ್ನಾಟಕಕ್ಕೆ ನೀರು ಬಿಡಬಾರದು ಎಂಬ ಹೇಳಿಕೆ ಮತ್ತು ರಾಜ್ಯದ ಮುಖ್ಯಮಂತ್ರಿಗೆ ಅವಮಾನ ಮಾಡಿರುವುದು ಖಂಡನಾರ್ಹ. ನೀರು ಅವರ ಆಸ್ತಿಯಲ್ಲ, ಅವರ ಅಪ್ಪನ ಆಸ್ತಿಯೂ ಅಲ್ಲ. ಅಣೆಕಟ್ಟು ಎತ್ತರ ಹೆಚ್ಚಳ ಮಾಡುವುದು ಆತನಿಗೆ ಸಂಬಂಧಿಸಿದ್ದಲ್ಲ. ಅಣೆಕಟ್ಟು ಅವರಿಗೆ ಸೇರಿದ್ದಲ್ಲ. ಸದನದಲ್ಲಿ ಸರಿಯಾಗಿ ಮಾತನಾಡಬೇಕು ಎಂದು ಹೇಳಿದರು. ಗೂಂಡಾಗಿರಿ ನಡವಳಿಕೆ ಸರಿಯಲ್ಲ.