ಕರ್ನಾಟಕದಲ್ಲಿ ಏನು ನಡೀತಾ ಇದೆ? ನೀವು ಏನು ಮಾಡ್ತಿದ್ದೀರಿ ! CMಗೆ ಅಮಿತ್ ಶಾ ಫುಲ್ ಕ್ಲಾಸ್

ಕೇಂದ್ರ ಗೃಹ ಸಚಿವ ಅಮಿತ್ ಶಾ ಬೆಂಗಳೂರಿಗೆ ಆಗಮಿಸಿದ್ದು, ಕರಾವಳಿಯಲ್ಲಿ ಸರಣಿ ಕೊಲೆಗಳು, ಬಿಜೆಪಿ ಕಾರ್ಯಕರ್ತರ ಆಕ್ರೋಶ, ರಾಜೀನಾಮೆ ಕೊಟ್ಟ ಘಟನೆಗಳ ಬಗ್ಗೆ ಸಿಎಂ ಬೊಮ್ಮಾಯಿ ಅವರಿಂದ ವರದಿ ಪಡೆದರು. ಬಳಿಕ ಇದೇ ವೇಳೆ ಬೊಮ್ಮಾಯಿ ಅವರಿಗೆ ಫುಲ್ಕ್ಲಾಸ್ ಮಾಡಿದ್ದಾರೆ ಎಂಬ ಮಾಹಿತಿ ಲಭಿಸಿದೆ.
ನಗರದ ಖಾಸಗಿ ಹೋಟೆಲ್ನಲ್ಲಿ ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಬಳಿಕ ಹಲವು ಬಿಜೆಪಿ ಕಾರ್ಯಕರ್ತರು ರಾಜೀನಾಮೆ ನೀಡಿದ ವಿಚಾರವಾಗಿ ಸುಧೀರ್ಘ ಮಾತುಕತೆ ನಡೆಸಿದ್ದಾರೆ. ಬಸವರಾಜ್ ಬೊಮ್ಮಾಯಿ ಜೊತೆ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾದ ಅಂಶಗಳನ್ನು ಕೇಳಿದ ಅಮಿತ್ ಶಾ ಅವರು, `ಕರ್ನಾಟಕ್ ಸೇ ಹಮಾರೆ ಪಾರ್ಟಿ ಮೆ ಕ್ಯಾ ಚಲ್ ರಹಾ ಹೈ ಬೊಮ್ಮಾಯಿ ಜೀ? ಎಂದು ಹಿಂದಿಯಲ್ಲೇ ಸಿಎಂ ಪ್ರಶ್ನಿಸಿದ್ದಾರೆ. ಕರ್ನಾಟಕದಲ್ಲಿ ಏನು ನಡೀತಾ ಇದೆ? ನೀವು ಏನು ಮಾಡ್ತಿದ್ದೀರಿ? ಕಾರ್ಯಕರ್ತರು ರಾಜೀನಾಮೆ ಕೊಡ್ತಾ ಇದ್ದಾರೆ. ನೀವು ಏನು ಕ್ರಮ ತೆಗೆದುಕೊಂಡಿದ್ದೀರ? ಅವರನ್ನು ಕರೆಸಿ ಮಾತುಕತೆ ನಡೆಸುತ್ತೇವೆ ಎಂದು ಹೇಳಿದ್ದೀರಿ, ಆದರೆ ಇನ್ನೂ ಅದನ್ನು ಏಕೆ ಕಾರ್ಯರೂಪಕ್ಕೆ ತಂದಿಲ್ಲ? ಕಾರ್ಯಕರ್ತರ ಆಕ್ರೋಶಕ್ಕೆ ಅಸಮಾಧಾನ ವ್ಯಕ್ತಪಡಿಸಿದರು ಎನ್ನಲಾಗಿದೆ. ಇದೇ ವೇಳೆ 2023ರ ಚುನಾವಣೆಯ ರಾಜಕೀಯ ಪರಿಸ್ಥಿತಿಯನ್ನು ಅವಲೋಕಿಸಿ, ಅರ್ಧಗಂಟೆಗೂ ಹೆಚ್ಚುಕಾಲ ಸಿಎಂ ಜೊತೆ ಮಾತುಕತೆ ನಡೆಸಿದರು.

Leave a Reply

Your email address will not be published. Required fields are marked *