ಬಿಜೆಪಿ ಸರಳ ಬಹುಮತಕ್ಕಾಗಿ ಈಗಾಗಲೇ ಹಲವು ತಂತ್ರಗಾರಿಕೆಯನ್ನ ಆರಂಭಿಸಿದ್ದು, 113 ಸ್ಥಾನಗಳನ್ನು ಗೆಲ್ಲಬೇಕಾಗಿದೆ. ಇನ್ನೂ ರಾಜ್ಯದಲ್ಲಿ ಆಡಳಿತರೂಢ ಬಿಜೆಪಿಗೆ ಆಡಳಿತ ವಿರೋಧಿ ಅಲೆ ಎದುರಾಗಿದ್ದು, ಪ್ರಧಾನಿ ಮೋದಿ ಅವರ ವರ್ಚಸ್ಸಿನ ಮೂಲಕ ಸರ್ಕಾರವನ್ನ ರಚಿಸಿಕೊಳ್ಳಲು ಸಿದ್ದತೆ ನಡೆಸಿದೆ.ಪ್ರಧಾನಿ ನರೇಂದ್ರ ಮೋದಿಯವರ ಪ್ರಭಾವಳಿಯಲ್ಲಿಯೇ ಇಲ್ಲಿ ಅಧಿಕಾರ ಪಡೆಯಲು ಭಾರತೀಯ ಜನತಾ ಪಕ್ಷ ನಿರ್ಧರಿಸಿದಂತಿದೆ. ಮೇ 10ರ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಕರ್ನಾಟಕದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು 15-20 ಸಮಾವೇಶ ಹಾಗೂ ರ್‍ಯಾಲಿಗೆ ಬಿಜೆಪಿ ರಾಜ್ಯ ಘಟಕ ಸಜ್ಜು ನಡೆಸಿದೆ.ಏಪ್ರಿಲ್ 28 ಮತ್ತು 29 ಮತ್ತು ಮೇ 3, 4, 6 ಮತ್ತು 7 ರಂದು ಪ್ರಚಾರ ನಡೆಸಲಿದ್ದಾರೆ. 12 ರಿಂದ 15 ರ್ಯಾಲಿಗಳು, ಸಾರ್ವಜನಿಕ ಸಭೆಗಳನ್ನ ನಡೆಸಲಿದ್ದಾರೆ ಮೇ 10 ರಂದು ನಡೆಯಲಿರುವ ಚುನಾವಣೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳಿಗೂ ಪ್ರತಿಷ್ಠೆ ಹಾಗೂ ಭವಿಷ್ಯದ ಪ್ರಶ್ನೆಯಾಗಿದ್ದು, ಎರಡೂ ರಾಷ್ಟ್ರೀಯ ಪಕ್ಷಗಳು ಕೊನೆಯ ಹಂತದ ಪ್ರಚಾರದಲ್ಲಿ ಅಲೆಯನ್ನು ಸಂಪೂರ್ಣವಾಗಿ ತಮ್ಮ ಪರವಾಗಿ ಮಾಡಿಕೊಳ್ಳುವ ನಿರೀಕ್ಷೆಯಲ್ಲಿವೆ.