ಕರ್ನಾಟಕ, ಗುಜರಾತ್, ಮದ್ಯಪ್ರದೇಶ, ತೆಲಂಗಾಣ, ಪಂಜಾಬ್ ರಾಜ್ಯಗಳಿಗೆ ಬಿಜೆಪಿ ರಾಜ್ಯಾಧ್ಯಕ್ಷರ ನೇಮಕವಾಗಬೇಕಿದೆ. ಇದರಲ್ಲಿ ನಾಲ್ಕು ರಾಜ್ಯಗಳ ರಾಜ್ಯಧ್ಯಕ್ಷರ ಪಟ್ಟಿ ಅಂತಿಮಗೊಂಡಿದೆ. ಆದರೆ ಕರ್ನಾಟಕದ ಆಯ್ಕೆಯಲ್ಲಿ ಕೆಲ ಗೊಂದಲಗಳು ಎರ್ಪಟ್ಟಿದೆ. ವಿಪಕ್ಷ ನಾಯಕನ ಆಯ್ಕೆ ಕಸರತ್ತು ಅಂತಿಮಗೊಂಡಿಲ್ಲ. ಅಧಿವೇಶನ ಆರಂಭಗೊಂಡರೂ ಸಮರ್ಥ ವಿಪಕ್ಷ ನಾಯಕರಿಲ್ಲದೆ ಬಿಜೆಪಿ ತೀವ್ರ ಮುಜುಗರ ಅನುಭವಿಸಿದೆ. ಹೀಗಾಗಿ ಕರ್ನಾಟಕದಲ್ಲಿ ಮೊದಲು ವಿಪಕ್ಷ ನಾಯಕನ ಆಯ್ಕೆ ಬಳಿಕ ರಾಜ್ಯಧ್ಯಕ್ಷರ ನೇಮಕವಾಗಲಿದೆ. ಈ ಕುರಿತು ಬಿಎಸ್ ಯಡಿಯೂರಪ್ಪನವರನ್ನು ದೆಹಲಿಗೆ ಕರೆಯಿಸಿಕೊಂಡು ಮಾತುಕತೆ ನಡೆಸಲಾಗಿದೆ . ಕರ್ನಾಟಕಕಕ್ಕೆ ಶೋಭಾಕರಂದ್ಲಾಜೆ ಅಥವಾ ಅಶ್ವಥ್ ನಾರಾಯಣ್ ಬಿಜೆಪಿ ರಾಜ್ಯಾಧ್ಯಕ್ಷೆಯಾಗುವ ಸಾಧ್ಯತೆ ಇದೆ. ಹೈಕಮಾಂಡ್ ಕೂಡ ಶೋಭಾ ಕರಂದ್ಲಾಜೆಯನ್ನು ರಾಜ್ಯಧ್ಯಕ್ಷೆ ಮಾಡಲು ಸಮ್ಮತಿಸಿದೆ. ಇತ್ತ ಯಡಿಯೂರಪ್ಪ ಬಣ ಕೂಡ ಗ್ರೀನ್ ಸಿಗ್ನಲ್ ನೀಡಿದೆ.. ಬೊಮ್ಮಾಯಿ ನೇತೃತ್ವದಲ್ಲಿ ಚುನಾವಣೆಯಲ್ಲಿ ಹೀನಾಯ ಸೋಲಾಗಿದೆ. ಹೀಗಾಗಿ ಬೊಮ್ಮಾಯಿ ರಾಜ್ಯಧ್ಯಕ್ಷರಾದರೆ ಪಕ್ಷ ಮತ್ತಷ್ಟು ದುರ್ಬಲವಾಗಲಿದೆ ಅನ್ನೋ ಮಾತುಗಳು ಕೇಳಿಬಂದಿದೆ. ಕರ್ನಾಟಕದಲ್ಲಿ ಬಿಜೆಪಿ ರಾಜ್ಯಧ್ಯಕ್ಷ ಸ್ಥಾನಕ್ಕೆ ಅಕಾಂಕ್ಷಿಗಳ ಪಟ್ಟಿ ದೊಡ್ಡದಿದೆ. ವಿ ಸೋಮಣ್ಣರಿಂದ ಹಿಡಿದು, ಎಂಪಿ ರೇಣುಕಾಚಾರ್ಯ ಸೇರಿದಂತೆ ಹಲವು ನಾಯಕರು ಬಹಿರಂಗವಾಗಿ ಸ್ಥಾನಕ್ಕಾಗಿ ಬೇಡಿಕೆ ಇಟ್ಟಿದ್ದಾರೆ. ರೆಬೆಲ್ ಆಗಿರುವ ರೇಣುಕಾಚಾರ್ಯ, ರಾಜ್ಯಧ್ಯಕ್ಷ, ಎಂಪಿ ಟಿಕೆಟ್ ಸೇರಿದಂತೆ ಹಲವು ಸ್ಥಾನಕ್ಕೂ ಬೇಡಿಕ ಇಟ್ಟಿದ್ದಾರೆ.