ಪ್ರಧಾನಿ ನರೇಂದ್ರ ಮೋದಿ ಜೂನ್ ತಿಂಗಳಲ್ಲಿ ಬೆಂಗಳೂರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ರಸ್ತೆಗಳಿಗೆ ಟಾರು ಹಾಕಿ, ಗುಂಡಿ ಮುಚ್ಚಿ, ರಸ್ತೆಗಳಿಗೆ ಬಣ್ಣ ಬಳಿದು ಕಾಮಗಾರಿ ನಡೆಸಲಾಗಿತ್ತು. ಪ್ರಧಾನಿ ಅತ್ತ ಹೋಗುತ್ತಿದ್ದಂತೆ ಇತ್ತ ರಸ್ತೆಯೂ ಕಿತ್ತು ಹೋಗಿತ್ತು. ಕಾಮಗಾರಿ ನಡೆಸಿದ್ದ ಮಹಾತ್ಮನಿಗೆ ಮತ್ತು ಬಿಬಿಎಂಪಿಗೆ ಜನರು ಹಿಡಿ ಶಾಪ ಹಾಕಿದ್ದರು. ಆದರೆ, ಈಗ ಮತ್ತೆ ಅದೇ ಗುತ್ತಿಗೆದಾರನಿಗೆ ಕೋಟ್ಯಾಂತರ ರೂಪಾಯಿ ಪ್ರಾಜೆಕ್ಟ್ ಸಿಕ್ಕಿದೆ.ಆಶ್ಚರ್ಯ ಆದರೂ ಇದು ಸತ್ಯ. ಕಳಪೆ ಕಾಮಗಾರಿ ಮಾಡಿ, ಜನರಿಂದ ಉಗಿಸಿಕೊಂಡು ಜೊತೆಗೆ 3 ಲಕ್ಷ ರೂಪಾಯಿ ದಂಡ ಕೂಡ ಕಟ್ಟಿದ್ದ ಕಳಪೆ ರಸ್ತೆ ಕಾಮಗಾರಿಗೆ ಇನ್ನೂ ಸರಿಯಾಗಿ ಮಣ್ಣು ಹಾಕಿಲ್ಲ ಅಷ್ಟರಲ್ಲೇ ಗುತ್ತಿಗೆದಾರ ರಮೇಶ್ ಎಸ್ ಅವರಿಗೆ ಬಿಡಿಎ ಮತ್ತೆ 99 ಕೋಟಿ ಮೊತ್ತದ ಯೋಜನೆಯನ್ನು ವಹಿಸಿದೆ.