ಕಳಪೆ ಸಂಪರ್ಕ ಹಾಗೂ ಸೌಕರ್ಯಗಳಿಂದಾಗಿ ನೂರಾರು ಫ್ಲಾಟ್‌ಗಳು ಮಾರಾಟವಾಗದೆ ಉಳಿದಿರುವ ಸಮಯದಲ್ಲಿ ಬೆಂಗಳೂರಲ್ಲಿ ಬಿಡಿಎಯಿಂದ ಹೊಸ ಅಪಾರ್ಟ್ಮೆಂಟ್ ಯೋಜನೆ-

ಕಳಪೆ ಸಂಪರ್ಕ ಹಾಗೂ ಸೌಕರ್ಯಗಳಿಂದಾಗಿ ನೂರಾರು ಫ್ಲಾಟ್‌ಗಳು ಮಾರಾಟವಾಗದೆ ಉಳಿದಿರುವ ಸಮಯದಲ್ಲಿ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಕೋನದಾಸಪುರದಲ್ಲಿ 1,300 ಫ್ಲ್ಯಾಟ್‌ಗಳೊಂದಿಗೆ ಎರಡು ಅಪಾರ್ಟ್ಮೆಂಟ್ ಸಂಕೀರ್ಣಗಳನ್ನು ನಿರ್ಮಿಸುತ್ತಿದೆ. ಸುಮಾರು 620 ಫ್ಲ್ಯಾಟ್‌ಗಳು ಮುಕ್ತಾಯದ ಹಂತದಲ್ಲಿವೆ.ವಿವಿಧ ಬಿಡಿಎ ಪ್ರಾಜೆಕ್ಟ್‌ಗಳಲ್ಲಿ ಕನಿಷ್ಠ 970 ಫ್ಲಾಟ್‌ಗಳು ಮಾರಾಟವಾಗಿಲ್ಲ. 350ರಷ್ಟು ಮಾತ್ರ ಮಾರಾಟವಾಗಿದೆ ಎಂದು ಬಿಡಿಎ ಅಂಕಿಅಂಶಗಳು ಹೇಳಿವೆ. ಪೂರ್ವ ಬೆಂಗಳೂರಿನ ಕೋನದಾಸಪುರದಲ್ಲಿ ಹೊಸ ವಸತಿ ಯೋಜನೆಗೆ 343.8 ಕೋಟಿ ರೂಪಾಯಿ ವೆಚ್ಚವಾಗಲಿದೆ. 3, 4 ಮತ್ತು 5 BHK ಗಳ ಕನಿಷ್ಠ 300 ಫ್ಲ್ಯಾಟ್‌ಗಳು ಇರಲಿವೆ.’ಕಳೆದ ಕೆಲ ವರ್ಷಗಳಲ್ಲಿ, ಹೆಚ್ಚಿನ ಸಂಖ್ಯೆಯ ಜನರು ಖಾಸಗಿ ಅಪಾರ್ಟ್‌ಮೆಂಟ್‌ಗಳು ಮತ್ತು ವಸತಿ ಎಸ್ಟೇಟ್‌ಗಳಿಗೆ ತೆರಳಿದ್ದಾರೆ. ಬಿಡಿಎ ಲೇಔಟ್‌ಗಳು ಮತ್ತು ಅಪಾರ್ಟ್‌ಮೆಂಟ್‌ಗಳೆರಡರಲ್ಲೂ ಕಳಪೆ ಇರುವ ಕಾಮಗರಿಯು ಬಿಡಿಎ ವಿಶ್ವಾಸಾರ್ಹ ವಸತಿ ಡೆವಲಪರ್ ಎಂದು ಜನರು ನಂಬುವುದಿಲ್ಲ ಎಂಬುದನ್ನು ತೋರಿಸುತ್ತದೆ. ಇದರ ಹಲವು ಸಂಕೀರ್ಣಗಳು ಕಳಪೆ ಗುಣಮಟ್ಟ ಮತ್ತು ಸೌಕರ್ಯಗಳ ಕೊರತೆಯನ್ನು ಹೊಂದಿವೆ. ಈ ಸಂದರ್ಭಗಳಲ್ಲಿ, ಅಂತಹ ಸಂಕೀರ್ಣಗಳನ್ನು ಏಕೆ ನಿರ್ಮಿಸಬೇಕು ಎಂದು ಬೆಂಗಳೂರು ನಾಗರಿಕರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *