ಕಾಂಗ್ರೆಸ್‌ಕೊಟ್ಟ ಭರವಸೆಗಳನ್ನ ಈಡೇರಿಸಲ್ಲ. ನನಗೆ ವಿಶ್ವಾಸವಿದೆ ಈ ಸರ್ಕಾರ ಬಹಳ ಕಾಲ ಉಳಿಯಲು ಸಾಧ್ಯವಿಲ್ಲ: ಬಿ.ಎಸ್‌.ಯಡಿಯೂರಪ್ಪ ಭವಿಷ್ಯ

ಲೋಕಸಭಾ ಚುನಾವಣೆ ಹಿನ್ನಲೆ ಪೂರ್ವ ತಯಾರಿ ಸಭೆಯಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಬಿ ಎಸ್‌ಯಡಿಯೂರಪ್ಪ ಅವರು, ವಿಧಾನಸಭಾ ಚುನಾವಣೆಯಲ್ಲಿ ಹಲವು ಕಾರಣಗಳಿಂದ ಸೋಲಾಗಿದೆ. ಸೋಲಿನ ಬಗ್ಗೆ ಧೃತಿಗೆಡುವುದು ಬೇಡ, ನಾವು ಮತ್ತೊಮ್ಮೆ ಎದ್ದು ನಿಲ್ಲಬೇಕಿದೆ. ಕಾಂಗ್ರೆಸ್‌ಸರ್ಕಾರ ಜನರಿಗೆ ಮೋಸ ಮಾಡುತ್ತಿದೆ. ಕಾಂಗ್ರೆಸ್ ಕೊಟ್ಟಿರುವ ಸುಳ್ಳು ಆಶ್ವಾಸನೆಗಳನ್ನು ಕಾರ್ಯರೂಪಕ್ಕೆ ತರಲೇಬೇಕು ಎಂದು ನಾವು ಅವರಿಗೆ ಒತ್ತಡ ಹೇರಬೇಕಿದೆ. ಅದರ ಮೂಲಕ ಪಕ್ಷವನ್ನು ಬಲಪಡಿಸುವಂತಹ ಪ್ರಾಮಾಣಿಕ ಪ್ರಯತ್ನವನ್ನು ನಾವು ನೀವೆಲ್ಲ ಸೇರಿ ಮಾಡಬೇಕಿದೆ ಎಂದು ಕಾರ್ಯಕರ್ತರಿಗೆ ಹೇಳಿದರು.ನಮ್ಮ ಸರ್ಕಾರ ಇದ್ದಾಗ, ನಾವು ಅನೇಕ ಜನಪರ ಯೋಜನೆಗಳನ್ನ ತಂದಿದ್ದೆವು. ಭಾಗ್ಯಲಕ್ಷ್ಮಿ, ಹಾಲು ಉತ್ಪಾದಕರಿಗೆ ಪ್ರೋತ್ಸಾಹ ಧನ ಹೀಗೆ ಹಲವಯ ಜನಪರ ಕೆಲಸ ಮಾಡಿದ್ದೆವು. ನನಗೆ ವಿಶ್ವಾಸವಿದೆ ಈ ಸರ್ಕಾರ ಬಹಳ ಕಾಲ ಉಳಿಯಲು ಸಾಧ್ಯವಿಲ್ಲ. ಕಾಂಗ್ರೆಸ್ ಅನೇಕ ಭರವಸೆ ಕೊಟ್ಟಿದೆ. ಕೊಟ್ಟ ಭರವಸೆಗಳನ್ನ ಈಡೇರಿಸಲ್ಲ ಅದು ತಾತ್ಕಾಲಿಕ ಎಂದು ವಾಗ್ದಾಳಿ ನಡೆಸಿದರು. ಏಕ್ ದೇಶ್ ಮೇ ಧೋ ಪ್ರಧಾನ್, ಧೋ ವಿಧಾನ್, ಧೋ ನಿಶಾನ್ ನಹೀ ಚಲೇಂಗೇ ಎಂದು ಶಾಮ್ ಪ್ರಸಾದ್ ಮುಖರ್ಜಿ ಅವರು ಕಾಶ್ಮೀರದಿಂದ ಹೋರಾಟ ಮಾಡಿದ್ದರು, ವಾಪಸ್ ಬರಲೇ ಇಲ್ಲ..! ಅಂತಹ ಮಹಾನ್ ವ್ಯಕ್ತಿ ಕಟ್ಟಿರುವಂತಹ ಈ ಪಕ್ಷ ಬರುವ ದಿನಗಳಲ್ಲಿ ನಮ್ಮ ವಿಶೇಷ ಪರಿಶ್ರಮದಿಂದ ಮೇಲೆ ಏಳಬೇಕಾಗಿದೆ.

Leave a Reply

Your email address will not be published. Required fields are marked *