ಕರ್ನಾಟಕ ಚುನಾವಣೆ, ವೋಟರ್‌ಐಡಿ ಹಗರಣ, ಪ್ರಸ್ತುತ ರಾಜಕೀಯ ವಿಚಾರದ ಬಗ್ಗೆ ಮಾತನಾಡುತ್ತಿದ್ದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್. ನಮ್ಮ ಸಮೀಕ್ಷೆಯ ಪ್ರಕಾರ ಕರ್ನಾಟಕ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ 136 ಸ್ಥಾನ ಸಿಗಲಿದೆ. ಬಿಜೆಪಿಗೆ 66 -70 ಸ್ಥಾನ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಕುಮಾರಸ್ವಾಮಿಜೊತೆ ಎಷ್ಟು ಅಂತಾ ಕುಸ್ತಿ ಮಾಡಲಿ? ಆ ವೇಳೆ ಅವಾಗ ಏನೋ ಹುಡುಗ ಇದ್ದೆ. ಕುಸ್ತಿ ಮಾಡಿದ್ದೆವು. ಈಗ ಕೂದಲು ಎಲ್ಲಾ ಬೆಳ್ಳಗೆ ಅಗಿದೆ. ಈವಾಗ ಕುಸ್ತಿ ಮಾಡೋಕೆ ಆಗುತ್ತಾ? ಆದರೆ ಅವರ ವಿರುದ್ದ ಸೈದ್ಧಾಂತಿಕವಾಗಿ ಕುಸ್ತಿ ಮಾಡುತ್ತೇನೆ ಎಂದು ಹೇಳಿ ಡಿಕೆಶಿ ನಕ್ಕಿದ್ದಾರೆ. ಸಿದ್ದರಾಮಯ್ಯ ಜೊತೆಗಿನ ಕಿತ್ತಾಟದ ವಿಷಯದ ಬಗ್ಗೆ ಪ್ರತಿಕ್ರಿಯಿಸಿದ ಅವರು ಸಿದ್ದರಾಮಯ್ಯ ನಾನು ಕಿತ್ತಾಟ ಮಾಡಿದ ಸಣ್ಣ ಉದಾಹರಣೆ ತೋರಿಸಿ ನೋಡೋಣ. ನಿಮಗೆ ಬೇಕು ಎಂಬ ಕಾರಣಕ್ಕೆ ಸಿಎಂ ವಿಚಾರ ಮಾತನಾಡುತ್ತೀರಿ ಎಂದು ಮಾಧ್ಯಮಗಳನ್ನೇ ಡಿಕೆಶಿ ದೂರಿದರು.