ಸಿದ್ದರಾಮಯ್ಯ ಬೆಂಬಲಿತ ಹಿರಿಯ ಶಾಸಕರಿಂದ ಪಕ್ಷದ ಸಚಿವರ ವಿರುದ್ಧವೇ ಸಿಎಂಗೆ ದೂರು ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಬಿ.ಕೆ. ಹರಿಪ್ರಸಾದ್ ಈಚೆಗೆ ಸಿಎಂ ಕೆಳಗಿಳಿಸೋದು ಗೊತ್ತು, ಆಯ್ಕೆ ಮಾಡೋದು ಗೊತ್ತು ಎಂದು ಹೇಳಿಕೆ ನೀಡಿದ್ದರು. ತಮಗೆ ಸಚಿವ ಸ್ಥಾನ ಸಿಗದಿದ್ದ ಬಗ್ಗೆ ಈ ರೀತಿ ಅಸಮಾಧಾನ ಹೊರಹಾಕಿದ್ದರೆ. ಇದರ ಬೆನ್ನಲ್ಲೇ ಪಕ್ಷದ ಸಚಿವರ ವಿರುದ್ಧ ಹಿರಿಯ ಶಾಸಕರು ಅಸಮಾಧಾನ ಹೊರಹಾಕಿ ಸಿಎಂ ಮುಂದೆ ಹೋಗಿದ್ದಾರೆ. ಸರ್ಕಾರ ರಚನೆಯಾದ 2 ತಿಂಗಳಲ್ಲೇ ಅಸಮಾಧಾನ ಸ್ಫೋಟಿಸಿದ್ದು, ಶಾಸಕಾಂಗ ಪಕ್ಷದ ಸಭೆ ಕರೆಯುವಂತೆ ಶಾಸಕರು ಒತ್ತಾಯಿಸಿದ್ದಾರೆ. ಇದೇ ಜು.27ಕ್ಕೆ ಸಭೆ ಕರೆಯಲಾಗಿದೆ. ಕಾಂಗ್ರೆಸ್‌ನಲ್ಲಿ ಎಲ್ಲವೂ ಸರಿ ಇಲ್ಲ ಎಂಬುದಕ್ಕೆ ಈ ಬೆಳವಣಿಗೆ ನಿದರ್ಶನದಂತೆ ತೋರುತ್ತಿದೆ. ಇದು ಸಚಿವ ಸ್ಥಾನ ವಂಚಿತ ಮಾಜಿ ಸಚಿವರು ಹಾಗೂ ಹಿರಿಯ ಶಾಸಕರ ಅಸಮಾಧಾನ ಎನ್ನಲಾಗುತ್ತಿದೆ. ಸಚಿವ ಸ್ಥಾನವೂ ಸಿಗಲಿಲ್ಲಾ. ಅತ್ತ ಹಿರಿತನಕ್ಕೆ ಗೌರವವೂ ಸಿಗುತ್ತಿಲ್ಲಾ. ಸಚಿವರಾಗಬೇಕಿದ್ದವರು ಅದನ್ನು ಕಳೆದುಕೊಂಡಿದ್ದೇವೆ. ಸಚಿವರಾದವರು ನಮ್ಮ ಹಿರಿತನಕ್ಕೆ ಗೌರವ ಕೊಡುತ್ತಿಲ್ಲಾ. ನಾವೇ ಆಗಬೇಕಿದ್ದ ಸಚಿವ ಸ್ಥಾನ ಇವರಿಗೆ ಸಿಕ್ಕಿದೆ. ನಮಗೆ ಗೌರವ ಸಿಗುತ್ತಿಲ್ಲಾ ಎನ್ನುವುದು ಅವರ ಅಸಮಾಧಾನ ಎಂದು ಮೂಲಗಳು ತಿಳಿಸಿವೆ.