ಮಾಧ್ಯಮಗಳೊಂದಿಗೆ ಮಾತನಾಡಿದ ಕೃಷಿ ಸಚಿವ ಬಿ.ಸಿ ಪಾಟೀಲ್ ಅವರು, ಭಾರತ ತೋಡೋನೇ ಆಗಿಲ್ಲ, ಇನ್ನು ಜೋಡಿಸೋ ಪ್ರಶ್ನೆ ಎಲ್ಲಿದೆ. ನಮಗೆ ಕೆಲಸ ಇದೆ. ಆದರೆ ಕಾಂಗ್ರೆಸ್ ನವರಿಗೆ ಮಾಡೋಕೆ ಕೆಲಸ ಇಲ್ಲ. ಸುಮ್ಮನೆ ಜನರ ಗಮನ ಸೇಳೆಯೊಕೆ ಭಾರತ ಜೋಡೊ, ಇನ್ಯಾವುದೋ ಯಾತ್ರೆ ಮಾಡ್ತಿದ್ದಾರೆ. ಭಾರತ ಜೋಡೋ ಅದು ಸಿದ್ದರಾಮಯ್ಯ ಡಿಕೆಶಿ ಜೋಡಿಸುವ ಯಾತ್ರೆ ಆಗಿತ್ತು. ರಾಹುಲ್ ಗಾಂಧಿ ಕರ್ನಾಟಕ ಬಿಟ್ಟು ಮಹಾರಾಷ್ಟ್ರಕ್ಕೆ ಹೋದ ಮೇಲೆ ಸಿದ್ದರಾಮಯ್ಯ, ಡಿಕೆಶಿ ಅವರವರ ಊರಿಗೆ ಅವರು ಹೋಗಿದ್ದಾರೆ. ಈಗ ಟ್ರ್ಯಾಕ್ಟರ್ ಮೆರವಣಿಗೆ ಮಾಡ್ತೀನಿ ಅಂತಿದ್ದಾರೆ. ಮೊದಲು ಎತ್ತಿನ ಮೆರವಣಿಗೆ ಒಂದುಸಾರಿ ಬಿದ್ದಾಗಿದೆ. ಸೈಕಲ್ ಅಂದ್ರು ಅದು ಪಂಚರ್ ಆಯಿತು. ಕಾಲು ನಡುಗೆ ಮಾಡಿ ಈಗ ಸುಸ್ತಾಗಿದ್ದಾರೆ. ಅದಕ್ಕೆ ಈಗ ಟ್ರಾಕ್ಟರ್ ರ‍್ಯಾಲಿ ಅಂತಿದ್ದಾರೆ. ಅವರಿಗೆ ಕೆಲಸ ಇಲ್ಲ, ನಿರುದೋಗಿಗಳಾಗಿದ್ದಾರೆ. ಅದಕ್ಕೆ ಮಾಡ್ತಿದ್ದಾರೆ ಅಂತ ಕಾಂಗ್ರೆಸ್ ನಾಯಕರ ವಿರುದ್ಧ ವ್ಯಂಗ್ಯವಾಡಿದರು.