ಕಾಂಗ್ರೆಸ್‌ನವರು ಅಧಿಕಾರಕ್ಕಾಗಿ ದೇಶದ್ರೋಹಿಗಳ ರಕ್ಷಣೆ ಮಾಡುತ್ತಿದ್ದಾರೆ ಅಧಿಕಾರಕ್ಕಾಗಿ ದೇಶ ಒತ್ತೆಯಿಡಲೂ ಸಿದ್ಧರಾಗಿದ್ದಾರೆ -ಬಿ.ಸಿ ಪಾಟೀಲ್

ಬಿಜೆಪಿ ಸರ್ಕಾರ ತಮ್ಮ ಭ್ರಷ್ಟಾಚಾರವನ್ನು ಮುಚ್ಚಿ ಹಾಕಲು ಕುಕ್ಕರ್ ಬ್ಲಾಸ್ಟ್ ಪ್ರಕರಣವನ್ನು ದೊಡ್ಡದಾಗಿ ಮಾಡಿದರು ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್‌ಹೇಳಿಕೆಗೆ ಚಿತ್ರದುರ್ಗ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕೃಷಿ ಸಚಿವ ಹಾಗೂ‌ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ ಪಾಟೀಲ್ ಭ್ರಷ್ಟಾಚಾರದ ಮೂಲ‌ಕರ್ತೃಗಳು ಕಾಂಗ್ರೆಸ್ ನಾಯಕರು. ಕಾಂಗ್ರೆಸ್ ಪಕ್ಷ ಭ್ರಷ್ಟಾಚಾರದ ತವರು ಮನೆ. ಕುಕ್ಕರ್‌ಬಾಂಬ್ ಬ್ಲಾಸ್ಟ್‌ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆಯ ತನಿಖೆಯಲ್ಲಿ ಸಾಕಷ್ಟು ಸಾಕ್ಷಿಗಳು ಪತ್ತೆ ಆಗಿದೆ. ಯಾವ ಸಂಘಟನೆಗಳ ಜೊತೆ ಆರೋಪಿಗೆ ನಂಟಿದೆ ಎಂದು ತಿಳಿದಿದೆ. ಕಾಂಗ್ರೆಸ್‌ನವರು ದೇಶದ್ರೋಹಿ, ಭಯೋತ್ಪಾದಕರ ರಕ್ಷಣೆಗೆ ಇಳಿದಿದ್ದು ನೋವಿನ ಸಂಗತಿ ಇನ್ನು ಕಾಂಗ್ರೆಸ್‌ನವರು ಅಧಿಕಾರಕ್ಕಾಗಿ ದೇಶದ್ರೋಹಿಗಳ ರಕ್ಷಣೆ ಮಾಡುತ್ತಿದ್ದಾರೆ. ಅಧಿಕಾರಕ್ಕಾಗಿ ದೇಶ ಒತ್ತೆಯಿಡಲೂ ಸಿದ್ಧರಾಗಿದ್ದಾರೆ ಎಂದು ಕಿಡಿ ಕಾರಿದರು.

Leave a Reply

Your email address will not be published. Required fields are marked *