ಕಾಂಗ್ರೆಸ್ನಾಯಕ ರಾಹುಲ್ ಗಾಂಧಿ ಇಂದು ಬೆಳಿಗ್ಗೆ ಮಂತ್ರಾಲಯದ ಅಭಯ ಆಂಜನೇಯ ದೇವಾಲಯದಿಂದ ಭಾರತ್ ಜೋಡೋ ಯಾತ್ರೆ ಆರಂಭಿಸಿ ರಾಜ್ಯವನ್ನು ಮರುಪ್ರವೇಶ ಮಾಡಿದರು. ಮಂತ್ರಾಲಯದಿಂದ ಆಂಧ್ರಪ್ರದೇಶದ ಚಟ್ನಿಪಲ್ಲಿ, ಮಾಧವರಂ ಮೂಲಕ ರಾಯಚೂರಿನ ತುಂಗಭದ್ರಾ ಸೇತುವೆ ಮೂಲಕ ರಾಜ್ಯ ಪ್ರವೇಶಿಸಿದರು. ಕಾಂಗ್ರೆಸ್ ನಾಯಕರಾದ ಸುಜ್ರೆವಾಲ್, ಡಿಕೆ ಶಿವಕುಮಾರ್, ಕೃಷ್ಣಬೈರೇಗೌಡ, ಹೆಚ್.ಕೆ.ಪಾಟೀಲ್, ಯುಟಿ ಖಾದರ್, ಆರ್.ವಿ.ದೇಶಪಾಂಡೆ, ಬಿ.ಕೆ.ಹರಿಪ್ರಸಾದ್ ಸೇರಿ ಹಲವರು ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು.