ಕಾಂಗ್ರೆಸ್‌ನಾಯಕ ಹಾಗೂ ವಯನಾಡು ಮಾಜಿ ಸಂಸದ ರಾಹುಲ್‌ಗಾಂಧಿಗೆ ತೀವ್ರ ಹಿನ್ನೆಡೆಯಾಗಿದೆ. ‘ಮೋದಿ ಎಂಬ ಸರ್‌ನೇಮ್‌ಉಳ್ಳವರೆಲ್ಲ ಕಳ್ಳರು’ ಪ್ರಕರಣದ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಕೇಸ್‌ನಲ್ಲಿ ಜೈಲು ಶಿಕ್ಷೆಗೆ ತಡೆ ನೀಡುವಂತೆ ಸೂರತ್‌ಸೆಷನ್ಸ್‌ಕೋರ್ಟ್‌ಗೆ ಮೇಲ್ಮನವಿ ಹೋಗಿದ್ರು. ಆದರೆ, ಸೆಷನ್ಸ್‌ಕೋರ್ಟ್‌ನ ದ್ವಿಸದಸ್ಯ ಪೀಠ ರಾಹುಲ್‌ಗಾಂಧಿಗೆ ಯಾವುದೇ ರಿಲೀಫ್‌ನೀಡಿಲ್ಲ. ಬದಲಾಗಿ ಮಾಜಿ ಸಂಸದನಿಗೆ ಜೈಲು ಶಿಕ್ಷೆಯನ್ನು ಎತ್ತಿ ಹಿಡಿದಿದೆ. ಇದರಿಂದಾಗಿ ಕಾಂಗ್ರೆಸ್‌ನಾಯಕನಿಗೆ ಮತ್ತೆ ಮಖಭಂಗವಾಗಿದೆ. ರಾಹುಲ್ ಗಾಂಧಿಗೆ ಸೂರತ್‌ಕೋರ್ಟ್2 ವರ್ಷ ಜೈಲು ಶಿಕ್ಷೆ ವಿಧಿಸಿದ ಬಳಿಕ ವಯನಾಡು ಸಂಸದನ ಸ್ಥಾನವನ್ನೂ ಕಳೆದುಕೊಂಡ್ರು. ಸೂರತ್‌ಸೆಷನ್ಸ್‌ಕೋರ್ಟ್‌ಈಗ ಜೈಲು ಶಿಕ್ಷೆಯನ್ನು ಎತ್ತಿಹಿಡಿದ ಕಾರಣ ಅವರು ಸದ್ಯಕ್ಕೆ ಸಂದರಾಗಲೂ ಸಾಧ್ಯವಿಲ್ಲ. ಸೂರತ್‌ಕೋರ್ಟ್‌ನಲ್ಲಿ ಜೈಲು ಶಿಕ್ಷೆಯನ್ನು ಎತ್ತಿಹಿಡಿದ ಕಾರಣ ರಾಹುಲ್‌ಗಾಂಧಿ ಈಗ ಗುಜರಾತ್‌ಹೈಕೋರ್ಟ್‌ಮೊರೆ ಹೋಗಲಿದ್ದಾರೆ ಎಂದು ಹೇಳಲಾಗುತ್ತಿದೆ.