ಕಾಂಗ್ರೆಸ್‍ನ ಬಹು ನಿರೀಕ್ಷಿತ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ 100 ಕಿಮೀ ಮುಗಿದಿದೆ- 7ನೇ ದಿನ ಮುಂದುವರಿದ ರಾಗಾ ಪಾದಯಾತ್ರೆ

ಕಾಂಗ್ರೆಸ್‍ನ ಬಹು ನಿರೀಕ್ಷಿತ ಭಾರತ್ ಜೋಡೋ ಯಾತ್ರೆ ರಾಹುಲ್ ಗಾಂಧಿ ನೇತೃತ್ವದಲ್ಲಿ ಕನ್ಯಾಕುಮಾರಿಯಿಂದ ಹೊರಟಿರುವ ಯಾತ್ರೆ ಕೇರಳದ ಕಣಿಯಾಪುರಂ ತಲುಪಿದೆ. ಸದ್ಯ ಕೇರಳದಲ್ಲಿರುವ ಯಾತ್ರೆ, ಮುಂದಿನ 18 ದಿನಗಳ ಕಾಲ ಸಂಚರಿಸಲಿದ್ದು, ಸೆಪ್ಟೆಂಬರ್ 30 ರಂದು ಕರ್ನಾಟಕವನ್ನು ತಲುಪಲಿದೆ. ಕರ್ನಾಟಕದಲ್ಲಿ 21 ದಿನಗಳ ಕಾಲ ಪಾದಯಾತ್ರೆ ನಡೆಯಲಿದೆ. 100 ಕಿಮೀ ಮುಗಿದಿದೆ, ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ 3,500 ಕಿಲೋಮೀಟರ್ ಮೆರವಣಿಗೆಯು 150 ದಿನಗಳಲ್ಲಿ ಪೂರ್ಣಗೊಳ್ಳಲಿದೆ. ಈ ಯಾತ್ರೆ 12 ರಾಜ್ಯಗಳಲ್ಲಿ ಸಂಚರಿಸಲಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, ಭಾರತದ ಕನಸು ಭಗ್ನಗೊಂಡಿದೆ, ಚದುರಿಹೋಗಿಲ್ಲ. ಕನಸನ್ನು ನನಸಾಗಿಸಲು ನಾವು ಭಾರತವನ್ನು ಸಂಪರ್ಕಿಸುತ್ತಿದ್ದೇವೆ.

Leave a Reply

Your email address will not be published. Required fields are marked *