ಕಾಂಗ್ರೆಸ್‌ಸರ್ಕಾರ ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ ಲೂಟಿ ಮಾಡುವುದನ್ನು ಬಿಟ್ಟರೆ ಬೇರೆನೂ ಮಾಡುವುದಿಲ್ಲ:ಕೇಂದ್ರ ಗೃಹ ಸಚಿವ ಅಮಿತ್‌ಶಾ

ಬೀದರ್‌ಜಿಲ್ಲೆಯ ಹುಲಸೂರು ತಾಲೂಕಿನ ಗೋರ್ಟಾ (ಬಿ) ಗ್ರಾಮದಲ್ಲಿ ಹುತಾತ್ಮರ ಸ್ಮಾರಕ, ಸರ್ದಾರ್‌ವಲ್ಲಭಭಾಯಿ ಪಟೇಲ್‌ಪ್ರತಿಮೆ ಹಾಗೂ ಧ್ವಜಸ್ತಂಭ ಅನಾವರಣಗೊಳಿಸಿ ಹಾಗೂ ರಾಯಚೂರು ಜಿಲ್ಲೆ ದೇವ​ದುರ್ಗ ತಾಲೂ​ಕಿನ ಗಬ್ಬೂರು ಗ್ರಾಮ​ದಲ್ಲಿ 4 ಸಾವಿರ ಕೋಟಿಗೂ ಹೆಚ್ಚಿನ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾ​ಟನೆ ಮತ್ತು ಶಂಕು ಸ್ಥಾಪನೆ ಕಾರ್ಯ​ಕ್ರ​ಮ​ ಉದ್ಘಾ​ಟಿಸಿ ಮಾತ​ನಾಡಿ​​ದ. ಕೇಂದ್ರ ಗೃಹ ಸಚಿವ ಅಮಿತ್‌ಶಾ ಕಾಂಗ್ರೆಸ್‌ನಾಯ​ಕ​ರು ಕರ್ನಾ​ಟಕವನ್ನು ಎಟಿಎಂ ಆಗಿ​ಸಿ​ಕೊಂಡಿದ್ದಾರೆ. ಇಲ್ಲಿನ ಹಣ​ ತೆಗೆ​ದು​ಕೊಂಡು ಹೋಗಿ ದೆಹ​ಲಿಯಲ್ಲಿ ಸುರಿ​ಯ​ಲಿದ್ದು, ಅಂಥವರಿಗೆ ಅಧಿ​ಕಾ​ರ ನೀಡ​ಬೇಡಿ ಕಾಂಗ್ರೆಸ್‌ಸರ್ಕಾರ ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ ಲೂಟಿ ಮಾಡುವುದನ್ನು ಬಿಟ್ಟರೆ ಬೇರೆನೂ ಮಾಡುವುದಿಲ್ಲ.ಕಾಂಗ್ರೆಸ್‌ನಿಂದ ರಾಜ್ಯ ಅಭಿವೃದ್ಧಿ ಮಾಡಲು ಸಾಧ್ಯವೇ ಕಳೆದ ಬಾರಿ ರಾಜ್ಯ​ದಲ್ಲಿ ಬಿಜೆಪಿ 104 ಸ್ಥಾನ​ಗ​ಳನ್ನು ಗಳಿ​ಸಿದ್ದರೂ ಕೇವಲ 40 ಸೀಟುಗಳನ್ನು ಗೆದ್ದಿದ್ದ ಜೆಡಿಎಸ್‌ನ ಎಚ್‌.​ಡಿ.ಕುಮಾರಸ್ವಾಮಿ ಅವರು ಕಾಂಗ್ರೆಸ್‌ಕುದುರೆ ಏರಿ ಸರ್ಕಾರ ರಚನೆ ಮಾಡಿ​ಕೊಂಡು ಅಕ್ರಮ, ಭ್ರಷ್ಟಾ​ಚಾ​ರ​ದಲ್ಲಿ ಮುಳು​ಗಿದ್ದರು. ಮುಂದೆ ರಾಜ್ಯ​ದಲ್ಲಿ ಅಂಥ ಪರಿ​ಸ್ಥಿ​ತಿ ತರಬೇಡಿ. ರಾಜ್ಯ​ವನ್ನು ಸಂಪೂರ್ಣ ಅಭಿವೃದ್ಧಿಯತ್ತ ತೆಗೆ​ದು​ಕೊಂಡು ಹೋಗು​ವ ಬಿಜೆ​ಪಿಗೆ ಸಂಪೂರ್ಣ ಬಹು​ಮತ ನೀಡಬೇಕು ಎಂದು ಮನವಿ ಮಾಡಿ​ದರು.

Leave a Reply

Your email address will not be published. Required fields are marked *