ಕಾಂಗ್ರೆಸ್‌ಸರ್ಕಾರ ತಾವು ನೀಡಿದ 5 ಗ್ಯಾರಂಟಿ ಯೋಜನೆಗೆ ತಾತ್ವಿಕ ಒಪ್ಪಿಗೆ ಮುಂದಿನ ಕ್ಯಾಬಿನೆಟ್‌ಬಳಿಕ ಆದೇಶ ಹೊರಡಿಸಲಾಗುವುದು :ಸಿಎಂ ಸಿದ್ದರಾಮಯ್ಯ

ಮೊದಲ ಕ್ಯಾಬಿನೆಟ್‌ಸಭೆಯ ಬಳಿಕ ಸುದ್ದಿಗೋಷ್ಠಿ ನಡೆಸಿದ ಸಿಎಂ ಸಿದ್ದರಾಮಯ್ಯ ಎಲ್ಲ ಮನೆಗಳಿಗೂ 200 ಯೂನಿಟ್‌ವಿದ್ಯುತ್‌ಉಚಿತವಾಗಿ ನೀಡಲಾಗುವುದು. ಪ್ರತಿ ತಿಂಗಳು ಕುಟುಂಬಕ್ಕೆ 10 ಕೆಜಿ ಅಕ್ಕಿಯನ್ನು ಉಚಿತ ನೀಡುತ್ತೇವೆ. ಮನೆಯೊಡತಿಗೆ ಪ್ರತಿ ತಿಂಗಳು 2 ಸಾವಿರ ರೂ. ನೀಡುತ್ತೇವೆ. ಲಕ್ಷುರಿ ಹೊರತು ಪಡಿಸಿ ಸರ್ಕಾರಿ ಬಸ್ಸಿನಲ್ಲಿ ಕರ್ನಾಟಕದ ಎಲ್ಲಾ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಬಸ್‌ಪಾಸ್‌ನೀಡಲಾಗುತ್ತದೆ. ಇದು ಕರ್ನಾಟಕ ರಾಜ್ಯದ ಮಹಿಳೆಯರಿಗೆ ಮಾತ್ರ ಅನ್ವಯವಾಗುತ್ತದೆ. ಹೊರ ರಾಜ್ಯದ ಮಹಿಳೆಯರಿಗೆ ಅನ್ವಯವಾಗುವುದಿಲ್ಲ. ಎರಡು ವರ್ಷದವರೆಗೆ ತಿಂಗಳಿಗೆ ಪದವೀಧರ ನಿರುದ್ಯೋಗಿಗಳಿಗೆ ಪ್ರತಿ ತಿಂಗಳು 3 ಸಾವಿರ ರೂ. ಭತ್ಯೆ, ಡಿಪ್ಲೋಮಾ ಪದವೀಧರರಿಗೆ ಪ್ರತಿ ತಿಂಗಳು 1,500 ರೂ.ಭತ್ಯೆ ನೀಡುತ್ತೇವೆ ಎಂದು ಘೋಷಣೆ ಮಾಡಿದರು. ಎಲ್ಲಾ ಗ್ಯಾರಂಟಿ ಯೋಜನೆ ಜಾರಿಗೆ 56 ಸಾವಿರ ಕೋಟಿ ರೂ. ಆಗಬಹುದು. ಸರ್ಕಾರದ ಬಜೆಟ್‌3.10 ಲಕ್ಷ ಕೋಟಿ ರೂ. ಇದೆ. 15 ಹಣಕಾಸು ಆಯೋಗದ ಪ್ರಕಾರ ಕೇಂದ್ರದಿಂದ 50 ಸಾವಿರ ಕೋಟಿ ರೂ. ಬರುವ ಸಾಧ್ಯತೆಯಿದೆ. ಆದರೆ ಕರ್ನಾಟಕಕ್ಕೆ 1 ಲಕ್ಷ ಕೋಟಿ ರೂ. ಬರಬೇಕಿತ್ತು. ಕರ್ನಾಟಕದಿಂದ 4 ಲಕ್ಷ ಕೋಟಿ ರೂ. ತೆರಿಗೆ ರೂಪದಲ್ಲಿ ಹೋಗುತ್ತದೆ. ಕೇಂದ್ರದಿಂದ ನಮಗೆ ನಿರೀಕ್ಷಿತ ಪ್ರಮಾಣದಿಂದ ಅನುದಾನ ಬರುತ್ತಿರಲಿಲ್ಲ. ಇಲ್ಲಿದ್ದ ಬಿಜೆಪಿ ಸರ್ಕಾರ. 25 ಬಿಜೆಪಿ ಸಂಸದರು ಈ ಹಣವನ್ನು ಕೇಳಲಿಲ್ಲ.ಮುಂದಿನ ಕ್ಯಾಬಿನೆಟ್‌, ಮುಂದಿನ ವಾರವೇ ನಡೆಯಲಿದೆ. ಎಲ್ಲಾ ಸಚಿವಾಲಯದ ಜೊತೆ ಚರ್ಚೆ ನಡೆಸಿ ಆದೇಶ ಜಾರಿ ಮಾಡಲಾಗುವುದು. ಈ ಲೆಕ್ಕಾಚಾರದ ವಿವರಗಳನ್ನು ಮುಂದೆ ನೀಡಲಾಗುವುದು. ಜುಲೈ ನಲ್ಲಿ ಮತ್ತೆ ರಾಜ್ಯ ಬಜೆಟ್ ಮಂಡನೆಯಾಗಲಿದೆ. ಎಲ್ಲವನ್ನೂ ಲೆಕ್ಕ ಹಾಕಿ ಈ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡುತ್ತೇವೆ ಎಂದು ತಿಳಿಸಿದರು.

Leave a Reply

Your email address will not be published. Required fields are marked *