2023ರಲ್ಲಿ ಸಿದ್ದರಾಮಯ್ಯ ಅವರ ಸರ್ಕಾರದ 2.0ರ ಕೊಡುಗೆಗಳು ಪ್ರಾರಂಭವಾಗಿದ್ದು, ಮತಾಂತರ ನಿಷೇಧ ವಾಪಸ್ – ಲವ್ ಜಿಹಾದ್, ಆಮಿಷ, ಬಲವಂತದ ಮತಾಂತರಕ್ಕೆ ನಾಂದಿ! ಮತ್ತೆ ಅಕ್ರಮ ಮರಳು ಮಾಫಿಯಾಗೆ ಜೀವ ಬಂದಿದೆ – ಕಲಬುರಗಿಯಲ್ಲಿ ಪೊಲೀಸ್ ಕೊಲೆ, ಎಟಿಎಂ ಸರ್ಕಾರ ತನ್ನ ಖಜಾನೆ ತುಂಬಿಸಿಕೊಳ್ಳಲು ಅಡ್ಡದಾರಿಗಳಿಗೆ ಕುಮ್ಮಕ್ಕು ನೀಡಿ, ಅಮಾಯಕಜೀವಗಳನ್ನು ಬಲಿ ಪಡೆಯುತ್ತಿದೆ. ಅಬಕಾರಿ ಇಲಾಖೆ- ಕೋಟಿ ಕೋಟಿ ರೂ.ಗೆ ಹುದ್ದೆಗಳ ಮಾರಾಟ. ಬೆಲೆ ಏರಿಕೆ – ವಿದ್ಯುತ್, ನೀರು, ಹಾಲು, ಮದ್ಯ, ಮೊಟ್ಟೆ, ಮಾಂಸ, ದಿನಸಿ, ತರಕಾರಿ…ಎಲ್ಲವೂ ಹೆಚ್ಚಳ ಎಂದು ಬಿಜೆಪಿ ಕೊಡುಗೆಗಳ ಪಟ್ಟಿ ಬಿಡುಗಡೆ ಎಂದು ಟೀಕಿಸಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ನಿಮ್ಮ ಗಮನಕ್ಕೂ ತಾರದೆ, ಹೈಕಮಾಂಡ್ ಕಲೆಕ್ಷನ್ ಏಜೆಂಟ್ ಸುರ್ಜೇವಾಲಾ ಬೆಲೆ ಏರಿಸಿ ಹೋಗಿದ್ದಾರೆಯೇ? ಎಂದು ಪ್ರಶ್ನಿಸಿದ್ದು, ಸರ್ಕಾರದ ಬೆಲೆ ಏರಿಕೆ ಎಂಬ ಕೂಸಿಗೆ ತಂದೆಯೇ ಇಲ್ಲದಂತಾಗಿದೆ ಎಂದು ರಾಜ್ಯ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದೆ.ಪ್ರತಿ ದಿನ ಸುದ್ದಿಗೋಷ್ಠಿ ಮಾಡಿ ಅಮಾಯಕರಿಗೆ ಬೆದರಿಕೆ ಹಾಕುತ್ತಿದ್ದ ಪೇಪರ್ ಟೈಗರ್ ಪ್ರಿಯಾಂಕ್‌ಖರ್ಗೆ ತಮ್ಮದೇ ಉಸ್ತುವಾರಿಯಲ್ಲಿರುವ ತವರು ಜಿಲ್ಲೆಯ ಈ ಪ್ರಕರಣಕ್ಕೆ ನ್ಯಾಯ ಒದಗಿಸುವ ಮೂಲಕ ತಮ್ಮ ಶೂರತ್ವವನ್ನು ತೋರಿಸಬೇಕಿದೆ ಎಂದು ಬಿಜೆಪಿ ಕಿಡಿಕಾರಿದೆ.