ಕಾಂಗ್ರೆಸ್ ಸರ್ಕಾರ ಛತ್ತಿಸ್‌ಗಢ, ಹರಿಯಾಣ, ತೆಲಂಗಾಣ ರಾಜ್ಯಗಳಲ್ಲಿ ಅಕ್ಕಿ ಖರೀದಿಗೆ ಮುಂದಾಗಿದೆ ಈ ಮೂಲಕ ಅಕ್ಕಿಯಲ್ಲೂ ಕಮಿಷನ್ ಹೊಡೆಯೋ ಹುನ್ನಾರ – ವಿಜಯೇಂದ್ರ ಆರೋಪ

ಜೆಪಿ ಪ್ರಮುಖ ನಾಯಕರಾದ ಆರ್. ಅಶೋಕ್, ವಿಜಯೇಂದ್ರ, ಅಶ್ವಥ್ ನಾರಾಯಣ್ ಅವರು ಇoದು ನಗರದಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿ, ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಈ ವೇಳೆ ಶಾಸಕ ವಿಜಯೇಂದ್ರ ಮಾತನಾಡಿ, ರಾಜ್ಯದ ಮುಖ್ಯಮಂತ್ರಿಗಳು ಅಕ್ಕಿ ವಿಚಾರದಲ್ಲಿ ಕೇಂದ್ರದ ಮೇಲೆ ಗೂಬೆ ಕೂರಿಸುತ್ತಿದ್ದಾರೆ. ಕೇಂದ್ರ ಸರ್ಕಾರ 5 ಕೆಜಿ ಕೊಡ್ತಿದೆ. ಉಳಿದ 5 ಕೆಜಿ ಅಕ್ಕಿಯನ್ನ ಬೇರೆ ಕಡೆ ಖರೀದಿ ಮಾಡಬಹುದು. ಛತ್ತೀಸ್‌ಗಢ, ಹರಿಯಾಣ, ತೆಲಂಗಾಣದಲ್ಲಿ ಅಕ್ಕಿ ಖರೀದಿಗೆ ಮುಂದಾಗಿದ್ದಾರೆ. ಇದರಲ್ಲಿ ಕಮೀಷನ್ ಹೊಡೆಯುವ ಹುನ್ನಾರ ಇದೆ. ನಮ್ಮ ರಾಜ್ಯದ ರೈತರಿಂದ ಅಕ್ಕಿ ಖರೀದಿ ಮಾಡಿದ್ರೆ ರೈತರಿಗೂ ಅನುಕೂಲವಾಗುವುದಿಲ್ಲವೇ? ಕಮಿಷನ್ ಹೊಡೆಯೋ ಉದ್ದೇಶವಿರೋಧಕ್ಕೆ ಬೇರೆ ರಾಜ್ಯದಿಂದ ಖರೀದಿ ಮಾಡೋಕೆ ಮುಂದಾಗಿದ್ದಾರೆ ಎಂದು ಕಿಡಿ ಕಾರಿದ್ದಾರೆ. ಕಾಂಗ್ರೆಸ್ ಧೋರಣೆ ನೋಡಿದ್ರೆ ನಮಗೆ ಬಹುಮತ ಬಂದಿದೆ, ಬಂದ ಹಾಗೆ ಆಡಳಿತ ಮಾಡ್ತೀವಿ. ಆನೆ ನಡೆದಿದ್ದೇ ದಾರಿ ಅಂತಾ ನಡೆಯುತ್ತಿದ್ದಾರೆ. ಚುನಾವಣಾ ಸಮಯದಲ್ಲಿ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಕಾರ್ಡ್ ಕೊಟ್ಟಿದ್ರು. ಈಗ ಗ್ಯಾರಂಟಿ ಜಾರಿ ಮಾಡೋದಕ್ಕೆ ಆಗ್ತಿಲ್ಲ ವಾಸ್ತವಿಕತೆ ಈಗ ಅವರಿಗೆ ಅರ್ಥ ಆಗ್ತಿದೆ. ಬಹುಶಃ ಗ್ಯಾರಂಟಿ ಕಾರ್ಡ್ ಕೊಡುವಾಗ ಕಾಂಗ್ರೆಸ್ ಬಹುಮತ ಪಡೆಯುತ್ತೇ ಅಂದುಕೊಂಡಿರಲಿಲ್ಲ. ಅದಕ್ಕಾಗಿ ಮನಸೋ ಇಚ್ಚೆ ಗ್ಯಾರಂಟಿ ಘೋಷಣೆ ಮಾಡಿದ್ರು. ಈಗ ಪೀಕಲಾಟ ಶುರುವಾಗಿದ್ದು, ಗ್ಯಾರಂಟಿ ಜಾರಿ ಮಾಡೋದು ಅಸಾಧ್ಯ ಅನ್ನೋದು ಸಿಎಂಗೆ ಮನವರಿಕೆಯಾಗಿದೆ ಎಂದು ತಿರುಗೇಟು ನೀಡಿದ್ದಾರೆ.

Leave a Reply

Your email address will not be published. Required fields are marked *