ಕರ್ನಾಟಕ ವಿಧಾನಸಭಾ ಚುನಾವಣೆ ಪ್ರಯುಕ್ತ ಚಿತ್ರದುರ್ಗದಲ್ಲಿ ಆಯೋಜಿಸಿದ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದಿಂದ ಮತದಾರರು ದೂರವಿರಬೇಕು.ಇವರೆಡು ನೋಡಲು ಒಂದೇ ಪಕ್ಷವಾಗಿದ್ದರೂ, ಸೈದ್ದಾಂತಿಕ, ನಡೆಯಲ್ಲಿ ಒಂದೇ ಎರಡೂ ಕುಟುಂಬ ರಾಜಕಾರಣದ ಪಕ್ಷ. ಎರಡೂ ಪಕ್ಷಗಳು ಭ್ರಷ್ಟಾಚಾರದಲ್ಲಿ ಮುಳುಗಿದೆ. ಸಮಾಜ ಒಡೆಯುವ ಕೆಲಸ ಮಾಡುತ್ತಿದೆ. ಈ ಎರಡೂ ಪಕ್ಷಗಳಿಂದ ಕರ್ನಾಟಕದ ಅಭಿವೃದ್ಧಿ ಸಾಧ್ಯವಿಲ್ಲ. ನಿಮ್ಮ ಮಕ್ಕಳ ಭವಿಷ್ಯದ ಕುರಿತು ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಕ್ಕೆ ಚಿಂತೆ ಇಲ್ಲ ಬಿಜೆಪಿ ನಾಗರೀಕರಿಗೆ ಚಿತ್ರದುರ್ಗದ ಸುರಕ್ಷಿತ 7 ಸುತ್ತಿನ ಕೋಟೆ ರೀತಿಯ ಸುರಕ್ಷತಾ ಯೋಜನೆಯನ್ನು ಜಾರಿ ಮಾಡಿದೆ. ಪಿಎಂ ಅವಾಸ್ ಯೋಜನೆಯಡಿಯಲ್ಲಿ ಮನೆ ನೀಡುವ ಮೂಲಕ ಸುರಕ್ಷತೆ, ಮನಗೆ ಗ್ಯಾಸ್ , ನೀರು ನೀಡುವ ಸುರಕ್ಷತೆ ಯೋಜನೆ ನೀಡಲಾಗಿದೆ. ಗರೀಬ್ ಕಲ್ಯಾಣ್ ಯೋಜನೆ ಮೂಲಕ ಪಡಿತರ ನೀಡುವ ಸುರಕ್ಷತೆ ಸೇರಿದಂತೆ 7 ಕೋಟೆಯ ಯೋಜನೆಯನ್ನು ಜನರಿಗೆ ನೀಡಿದ್ದೇವೆ. ಕರ್ನಾಟಕದ ಅಭಿವೃದ್ಧಿಯಿಂದ ಭಾರತದಕ್ಕೆ ಮಹತ್ತರ ಕೊಡುಗೆ ನೀಡಲಿದೆ. ಇದಕ್ಕೆ ಡಬಲ್ ಎಂಜಿನ್ ಬಿಜೆಪಿ ಸರ್ಕಾರವನ್ನು ಮತ್ತೆ ಗೆಲ್ಲಿಸಬೇಕು ಎಂದು ಪ್ರಧಾನಿ ಮೋದಿ ಮನವಿ ಮಾಡಿದ್ದಾರೆ.