ಕಾನನಕಟ್ಟೆ ಗ್ರಾಮದಲ್ಲಿ ಕಳೆದ 20 ದಿನಗಳಿಂದ ಜನ ನಿಗೂಢ ಜ್ವರದಿಂದ ಬಳಲುತ್ತಿದ್ದಾರೆ

ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಅಣಬೂರು ಗ್ರಾಪಂ ವ್ಯಾಪ್ತಿಯ ಕಾನನಕಟ್ಟೆ ಗ್ರಾಮದಲ್ಲಿ ಸಾವಿರಕ್ಕೂ ಅಧಿಕ ಜನಸಂಖ್ಯೆಯಿದ್ದು, ಗ್ರಾಮದ ಪ್ರತಿಯೊಂದು ಮನೆಯಲ್ಲೂ ಜನ ನಿಗೂಢ ಜ್ವರದಿಂದ ಬಳಲುತ್ತಿದ್ದಾರೆ. ಜ್ವರ, ಕಾಲುನೋವು, ಮೂಗಿನ ಹತ್ತಿರ ಕಪ್ಪು ಕಲೆ, ಕೈಕಾಲು ಬಾವು ಬರುವುದು, ಚರ್ಮದ ಪೊರೆ ಸುಲಿಯುವುದು, ಗುಳ್ಳೆಗಳು, ಸುಸ್ತು ಸೇರಿ ಹಲವಾರು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಂಡಿವೆ. ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದರೂ ಪ್ರಯೋಜನವಾಗಿಲ್ಲ.ಸೊಳ್ಳೆ ಕಾಟ ಹಾಗೂ ಗ್ರಾಮಕ್ಕೆ ಸರಬರಾಜು ಆಗುತ್ತಿರುವ ನೀರು ಸೇವನೆಯಿಂದ ಈ ರೀತಿ ಆಗಿರುವ ಸಾಧ್ಯತೆಯಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

Leave a Reply

Your email address will not be published.