ಕಾಶಿಯಲ್ಲಿ ಕಾಶಿ ಉತ್ಸವ ಹಾಗೂ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಮಾಡಲು ಬಿಬಿಎಂಪಿ ನೌಕರರು ಮೆಗಾ ಟ್ರಿಪ್‍ಗೆ ಸಿದ್ಧತೆ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಕಾಶಿಯಲ್ಲಿ ಕಾಶಿ ಉತ್ಸವ ಹಾಗೂ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಮಾಡಲು ಬರೋಬ್ಬರಿ 1,300 ಜನರು ಬೆಂಗಳೂರಿಂದ ಕಾಶಿ ಟ್ರಿಪ್ ಮಾಡುತ್ತಿದ್ದಾರೆ. ಇದೇ ತಿಂಗಳ 11, 12 ಹಾಗೂ 13 ರಂದು ಕಾಶಿ ಉತ್ಸವ ನಡೆಸಲು ತೀರ್ಮಾನವಾಗಿದೆ. ಚಿತ್ರನಟಿ ಶಿಲ್ಪಾಶೆಟ್ಟಿ, ಎಸ್.ಎಂ. ಕೃಷ್ಣ, ತಾರಾ ಸೇರಿದಂತೆ ಹಲವು ಸೆಲಬ್ರಿಟಿಗಳು ಸಹ ಈ ಕನ್ನಡ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂಬ ಮಾಹಿತಿಯೂ ಇದೆ. ಇದಕ್ಕಾಗಿ ಸಂಘದ ಅಧ್ಯಕ್ಷ ಅಮೃತ್ ರಾಜ್, ಶಿಲ್ಪಾ ಶೆಟ್ಟಿ ಭೇಟಿ ಮಾಡಿ ಆಹ್ವಾನ ನೀಡಿದ್ದು, ಅವರೆಲ್ಲರೂ ಭಾಗವಹಿಸುವತ್ತ ಗ್ರೀನ್ ಸಿಗ್ನಲ್ ಸಹ ನೀಡಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿದೆ. ನ.11 ರಂದು ಖುದ್ದು ಸರ್ಕಾರವೇ ಕಾಶಿಯಾತ್ರೆಗೆ ರೈಲು ಸೇವೆ ಒದಗಿಸಲಿದೆ. ಬಿಬಿಎಂಪಿ ನೌಕರರು ಕಾಶಿ ಟೂರ್ ಮಾಡಲು ಚಕ್ಕರ್ ಹಾಕುವುದು ಖಚಿತವಾಗಿದೆ. ಇದು ಸಾರ್ವಜನಿಕರಿಗೆ ಎಷ್ಟರ ಮಟ್ಟಿಗೆ ಎಫೆಕ್ಟ್ ಆಗುತ್ತೆ ಅಂತಾ ಕಾದುನೋಡಬೇಕಿದೆ.

Leave a Reply

Your email address will not be published. Required fields are marked *