ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ವಿಧಾನಸಭೆಯನ್ನುದ್ದೇಶಿಸಿ ಮಾತನಾಡುತ್ತಾ, ಬಿಹಾರದ ಸರನ್ ಜಿಲ್ಲೆಯಲ್ಲಿ ಕಳ್ಳ ಬಟ್ಟಿ ಸೇವಿಸಿ 53 ಮಂದಿ ಸಾವನ್ನಪ್ಪಿದ ಘಟನೆಯನ್ನ ಉಲ್ಲೇಖಿಸಿದರು. ನಾವು ಮನವಿ ಮಾಡುತ್ತಲೇ ಇದ್ದೇವೆ, ಕುಡಿತವು ನಿಮಗೆ ಒಳ್ಳೆಯದನ್ನ ತಂದುಕೊಡಲ್ಲ. ಆದರೂ ಕುಡಿದು ಸಾಯುತ್ತೀರಿ. ಇದೇ ವೇಳೆ `ಜೊ ಪಿಯೇಗಾ ವೋ ಮರೇಗಾ (ಯಾರು ಕುಡಿಯುತ್ತಾರೋ ಅವರು ಸಾಯುತ್ತಾರೆ)’ ಮದ್ಯ ಕುಡಿದು ಸತ್ತವರಿಗೆ ಯಾವುದೇ ಪರಿಹಾರ ಕೊಡುವುದಿಲ್ಲ ಎಂಬ ನಿತೀಶ್‌ಕುಮಾರ್ ಹೇಳಿಕೆಯನ್ನ ಖಂಡಿಸಿ ಬಿಜೆಪಿ ನಾಯಕರು ಪ್ರತಿಭಟನೆ ನಡೆಸಿದರು, ರಾಜೀನಾಮೆಗೂ ಒತ್ತಾಯಿಸಿದರು. ಏಪ್ರಿಲ್ 2016ರಲ್ಲಿ ನಿತೀಶ್ ಕುಮಾರ್ ಸರ್ಕಾರವು ಬಿಹಾರದಲ್ಲಿ ಮದ್ಯ ಮಾರಾಟ ಮತ್ತು ಸೇವನೆಯನ್ನು ಸಂಪೂರ್ಣವಾಗಿ ನಿಷೇಧಿಸಿತು.