ಸ್ವಾತಂತ್ರ್ಯ ಹೋರಾಟಗಾರ ಕೆದಂಬಾಡಿ ರಾಮಯ್ಯ ಗೌಡರ ಪ್ರತಿಮೆಯನ್ನು ಮಂಗಳೂರಿನ ಬಾವುಟಗುಡ್ಡೆಯಲ್ಲಿ ಲೋಕಾರ್ಪಣೆ ಮಾಡಿದ ಬಳಿಕ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಬಂಧುಗಳೇ ನಾನು ಇಲ್ಲಿ ಸಿಎಂ ಆಗಿ ಬಂದಿಲ್ಲ. ಸ್ವಾತಂತ್ರ್ಯ ಹೋರಾಟಗಾರರಿಗೆ ಗೌರವ ಸಲ್ಲಿಸಲು ಸೇವಕನಾಗಿ ಬಂದಿದ್ದೇನೆ. ನಾವು ನಮ್ಮ ಹೆಜ್ಜೆ ಗುರುತುಗಳನ್ನು ಬಿಟ್ಟು ಹೋಗಬೇಕು. ದೇಶಕ್ಕಾಗಿ ಪ್ರಾಣ ಕೊಡುವ ಕಾಲ ಇಲ್ಲ. ಈಗ ದೇಶಕ್ಕಾಗಿ ಬದುಕಬೇಕಿದೆ. ಬ್ರಿಟಿಷರು ವ್ಯಾಪಾರಕ್ಕೆ ಬಂದು ನಮ್ಮ ನಮ್ಮೊಳಗೆ ದ್ವೇಷ ಹುಟ್ಟಿಸಿ ಆಡಳಿತ ಮಾಡಿದರು. ಬ್ರಿಟಿಷರ ವಿರುದ್ಧ ರೈತರು ತಿರುಗಿ ಬಿದ್ದಾಗ ರೈತ ಕುಟುಂಬದಲ್ಲಿ ಹುಟ್ಟಿದ್ದ ರಾಮಯ್ಯ ಗೌಡರು ರೈತರನ್ನೇ ಯೋಧರನ್ನಾಗಿಮಾಡಿದ್ದಾರೆ. ರೈತರು ಯಾವಾಗ ಹೋರಾಟಗಾರರಾಗುತ್ತಾರೋ ಅಂದೇ ಕ್ರಾಂತಿಯಾಗುತ್ತೆ ನಾವು ಭಾರತ್ ಮಾತಕೀ ಜೈ ಅಂತ ಕೂಗಲು ಸ್ವಾತಂತ್ರ್ಯ ಹೋರಾಟಗಾರರ ಕೆಜ್ಜೆದೆ ಕಾರಣ. ಅದರಲ್ಲಿ ಕೆದಂಬಾಡಿ ರಾಮಯ್ಯ ಗೌಡರು ಕೂಡ ಒಬ್ಬರು. ಕೆದಂಬಾಡಿ ರಾಮಯ್ಯ ಗೌಡರ ಸ್ಮಾರಕ ಬೆಂಗಳೂರಿನಲ್ಲೂ ಮಾಡ್ತೇವೆ. ಅವರ ವಿಚಾರಗಳನ್ನು ಮುಂದೆ ಪಠ್ಯಗಳಲ್ಲೂ ತರುತ್ತೇವೆ. ನಮ್ಮ ಎಲ್ಲಾ ಸಾಧನೆಗಳಿಗೆ ನಮ್ಮ ಸಾಧಕರ ಹೆಸರುಗಳೇ ಇರಲಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟರು. ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಡಾ. ನಿರ್ಮಲಾನಂದ ಮಹಾ ಸ್ವಾಮೀಜಿ. ದ.ಕ ಉಸ್ತುವಾರಿ ಸಚಿವ ಸುನೀಲ್ ಕುಮಾರ್, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಭಾಗಿ, ಸಚಿವರಾದ ಎಸ್.ಅಂಗಾರ, ಅಶ್ವಥ್ ನಾರಾಯಣ, ಜಿಲ್ಲೆಯ ಶಾಸಕರಾದ ಸಂಜೀವ ಮಠಂದೂರು, ವೇದವ್ಯಾಸ ಕಾಮತ್ ಮತ್ತು ಭರತ್ ಶೆಟ್ಟಿ ಸೇರಿ ಹಲವು ಗಣ್ಯರು ಉಪಸ್ಥಿತರಿದ್ದರು