ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ಶಾಂಘೈ ಸಹಕಾರ ಶೃಂಗಸಭೆಯಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ಪುಟಿನ್, ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್, ಪಾಕಿಸ್ತಾನ ಪ್ರಧಾನಿ ಶೆಹಬಾಜ್‌ಷರೀಫ್‌ಸೇರಿದಂತೆ ಕಜಕಸ್ತಾನ್, ಕಿರ್ಗಿಸ್ತಾನ್, ತಜಕಿಸ್ತಾನ್‌ಮತ್ತು ಉಜ್ಬೇಕಿಸ್ತಾನ್‌ದ ಮುಖ್ಯಸ್ಥರು ಭಾಗಿಯಾಗಿದ್ದರು. ವರ್ಚುವಲ್ ಆಗಿ ನಡೆಯುತ್ತಿರುವ ಸಭೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಭಯೋತ್ಪಾದನೆ ಪೋಷಿಸುತ್ತಿರುವ ಪಾಕಿಸ್ತಾನಕ್ಕೆ ಖಡಕ್ ಸಂದೇಶ ರವಾನಿಸಿದ್ದಾರೆ. ಕೆಲ ದೇಶ ಭಯೋತ್ಪಾದಕರಿಗೆ ಸುರಕ್ಷಿತ ಆಶ್ರಯ ನೀಡುತ್ತಿದೆ ಎಂದು ಮೋದಿ, ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಪ್ ಸಮ್ಮುಖದಲ್ಲೇ ಹೇಳಿದ್ದಾರೆ. ಭಯೋತ್ಪಾದನೆ ದೇಶ ಮಾತ್ರವಲ್ಲ ವಿಶ್ವದ ಶಾಂತಿ ಕದಡುತ್ತದೆ. ಭಾರತ ನಿರಂತರವಾಗಿ ಭಯೋತ್ಪಾದನೆ ವಿರುದ್ಧ ಹೋರಾಡುತ್ತಿದೆ. ಕೆಲ ದೇಶ ಗಡಿಯಾಚಗಿನ ಭಯೋತ್ಪಾದನೆಯನ್ನು ಅಸ್ತ್ರವಾಗಿ ಬಳಸುತ್ತಿದೆ. ಭಯೋತ್ಪಾದಕರಿಗೆ ಸುರಕ್ಷಿತ ಆಶ್ರಯ ನೀಡಿ ಪೋಷಿಸುತ್ತಿದೆ. ಶಾಂಘೈ ಸಹಕಾರ ಶೃಂಗಸಭೆ ಈ ರೀತಿ ಭಯೋತ್ಪಾದನೆ ಪೋಷಿಸುವ ದೇಶವನ್ನು ಖಂಡಿಸುತ್ತದೆ. ಇದಕ್ಕೆ SCO ರಾಷ್ಟ್ರಗಳು ಅವಕಾಶ ನೀಡುವುದಿಲ್ಲ ಎಂದು ಮೋದಿ ಹೇಳಿದ್ದಾರೆ.SCO ಭಾರತಕ್ಕೆ ವಿಸ್ತೃತ ಕುಟಂಬವಾಗಿದೆ. ಸುರಕ್ಷತೆ, ಅತ್ಯುತ್ತಮ ಸಹಕಾರ, ದ್ವಿಪಕ್ಷೀಯ ಸಂಬಂಧ, ಆರ್ಥಿಕ ಅಭಿವೃದ್ಧಿ, ಸಾರ್ವಭೌಮತ್ವ, ಪ್ರಾದೇಶಿಕ ಗೌರವ, ಪರಿಸರ ಸಂರಕ್ಷಣೆಗಳು ನಮ್ಮ ಆಧಾರ ಸ್ತಂಭಗಳಾಗಿದೆ. ಆದರೆ ಇದೇ ಭಾರತ ಭಯೋತ್ಪಾದನೆಯನ್ನು ಎಂದಿಗೂ ಸಹಿಸುವುದಿಲ್ಲ. ಭಯೋತ್ಪಾದನೆಯನ್ನು ಮಟ್ಟ ಹಾಕಲು ಭಾರತ ಸತತ ಪ್ರಯತ್ನ ಮಾಡಲಿದೆ ಎಂದು ಮೋದಿ ಹೇಳಿದ್ದಾರೆ.ಇಷ್ಟೇ ಅಲ್ಲ ಹಲವು ವೇದಿಕೆಗಳಲ್ಲಿ ಪಾಕಿಸ್ತಾನವನ್ನು ಗುರಿಯಾಗಿಸಿ ಮಾತನಾಡಿದೆ. ಪ್ರತಿ ಭಾರಿ ಪಾಕಿಸ್ತಾನ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮುಖಭಂಗ ಅನುಭವಿಸಿದೆ.