ದೆಹಲಿಯಲ್ಲಿ ಸಿಬ್ಬಂದಿಗಳ ವರ್ಗಾವಣೆ ಮತ್ತು ಪೋಸ್ಟಿಂಗ್ ಹಕ್ಕಿನ ಕುರಿತು ಸುಪ್ರೀಂ ಕೋರ್ಟ್ ಗುರುವಾರ ಐತಿಹಾಸಿಕ ತೀರ್ಪು ನೀಡಿದೆ. ಸಿಜೆಐ ಡಿವೈ ಚಂದ್ರಚೂಡ್ ಅವರು ತೀರ್ಪನ್ನು ಪ್ರಕಟಿಸಿದ್ದು, ಪೀಠದಲ್ಲಿರುವ ಉಳಿದ ನ್ಯಾಯಾಧೀಶರು ಕೂಡ ದೆಹಲಿಯಲ್ಲಿ ಉಂಟಾದ ಪರಿಸ್ಥಿತಿ ಮತ್ತೆ ಯಾವ ರಾಜ್ಯದಲ್ಲೂ ಆಗಬಾರದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಜಂಟಿ ಕಾರ್ಯದರ್ಶಿ ಮಟ್ಟಕ್ಕಿಂತ ಹೆಚ್ಚಿನ ಅಧಿಕಾರಿಗಳ ಮೇಲೆ ದೆಹಲಿ ಸರ್ಕಾರಕ್ಕೆ ಯಾವುದೇ ಅಧಿಕಾರವಿಲ್ಲ ಎಂದು ನ್ಯಾಯಮೂರ್ತಿ ಭೂಷಣ್ ಅವರ 2019 ರ ತೀರ್ಪನ್ನು ನಾವು ಒಪ್ಪುವುದಿಲ್ಲ. ನ್ಯಾಷನಲ್‌ಕ್ಯಾಪಿಟಲ್‌ಟೆರಿಟರಿ ದೆಹಲಿ ಒಂದು ಪೂರ್ಣ ರಾಜ್ಯವಲ್ಲದಿದ್ದರೂ ಸಹ, ಅದು ಕಾನೂನು ಮಾಡುವ ಅಧಿಕಾರವನ್ನು ಹೊಂದಿದೆ ಎಂದು ಸುಪ್ರೀಂ ಕೋರ್ಟ್‌ಪೀಠ ಹೇಳಿದೆ. ಗುರುವಾರ ತನ್ನ ಸರ್ವಾನುಮತದ ತೀರ್ಪಿನಲ್ಲಿ ಚುನಾಯಿತ ಸರ್ಕಾರದ ಪರವಾಗಿ ತೀರ್ಪು ನೀಡಿದೆ. ಕಾನೂನು ಮತ್ತು ಸುವ್ಯವಸ್ಥೆ ಮತ್ತು ಭೂಮಿ ಹೊರತುಪಡಿಸಿ ಎಲ್ಲಾ ಸೇವೆಗಳ ಮೇಲೆ ಸರ್ಕಾರವೇ ಅಧಿಕಾರವನ್ನು ಹೊಂದಿರುತ್ತದೆ ಎಂದು ಹೇಳಿದೆ. ಅಧ್ಯಕ್ಷರು ವಹಿಸಿದಂತೆ ಆಡಳಿತಾತ್ಮಕ ಪಾತ್ರದ ಅಡಿಯಲ್ಲಿ ಲೆಫ್ಟಿನೆಂಟ್‌ಗವರ್ನರ್‌ಅಧಿಕಾರಗಳನ್ನು ಚಲಾಯಿಸಬೇಕು ಎಂದಿದೆ.