ಕೇಂದ್ರ ಗೃಹ ಸಚಿವ ಅಮಿತ್‌ಶಾ ಮುಂಬೈಗೆ ಭೇಟಿ ನೀಡಿದ್ದ ವೇಳೆ ಭದ್ರತಾ ಲೋಪ ಘಟನೆ ಉಂಟಾಗಿದೆ. ಗೃಹ ಸಚಿವಾಲಯದ ಅಧಿಕಾರಿಯಂತೆ ನಟಿಸುವ ವ್ಯಕ್ತಿಯೊಬ್ಬ ಬಿಜೆಪಿ ನಾಯಕನ ಬಳಿ ಗಂಟೆಗಟ್ಟಲೆ ಸುತ್ತುತ್ತಿದ್ದರು ಎಂದು ತಿಳಿದುಬಂದಿದೆ. ಹಾಗೆ, ನಿರ್ಬಂಧಿತ ಪ್ರದೇಶಗಳಲ್ಲಿ ಆರೋಪಿ ಮುಕ್ತವಾಗಿ ತಿರುಗಾಡಿದ್ದು, ನಂತರ ಆತನನ್ನು ಬಂಧಿಸಲಾಗಿದೆ. ಇನ್ನು, ಬಂಧಿತ ವ್ಯಕ್ತಿ ಹೇಮಂತ್‌ಪವಾರ್ 32 ವರ್ಷದ ವ್ಯಕ್ತಿ, ಆತ ಆಂಧ್ರ ಪ್ರದೇಶದ ಸಂಸದರೊಬ್ಬರ ಆಪ್ತ ಕಾರ್ಯದರ್ಶಿ ಎಂದು ಹೇಳಿಕೊಂಡಿದ್ದಾನೆ. ಈ ಹಿನ್ನೆಲೆ ಪೊಲೀಸರು ಆತನನ್ನು ಹೆಚ್ಚಿನ ವಿಚಾರಣೆಗಾಗಿ ಬಂಧಿಸಿದ್ದಾರೆ.