ಕೇಂದ್ರ ಗೃಹ ಸಚಿವ ಅಮಿತ್ ಶಾ ಉನ್ನತ ಮಟ್ಟದ ಸಭೆ ನಡೆಸುತ್ತಿದ್ದಾರೆ. ದೇಶದಲ್ಲಿರುವ ಗುಪ್ತಚರ ಇಲಾಖೆಯ ಪ್ರಮುಖ ಅಧಿಕಾರಿಗಳ ಜೊತೆಗೆ ದೆಹಲಿಯ ರಹಸ್ಯ ಸ್ಥಳದಲ್ಲಿ ಸಭೆ ಆಯೋಜನೆಯಾಗಿದ್ದು, ಗುಪ್ತಚರ ಇಲಾಖೆಯ ಅಧಿಕಾರಿಗಳು ಹೊರತುಪಡಿಸಿ ಯಾರಿಗೂ ಪ್ರವೇಶ ನೀಡಲಾಗಿಲ್ಲ. ಬೆಳಗ್ಗೆ 11 ಗಂಟೆಗೆ ಸಭೆ ಆರಂಭಗೊಂಡಿದ್ದು, ಸಂಜೆ ಐದು ಗಂಟೆ ವರೆಗೂ ಈ ಸಭೆ ನಡೆಯಲಿದೆ. ಸಭೆಯಲ್ಲಿ ದೇಶದ ಆತಂರಿಕ ಭದ್ರತೆ, ಬಾಹ್ಯ ಭದ್ರತೆ, ಭಯೋತ್ಪಾದಕರ ಬೆದರಿಕೆಗಳು, ಮಾದಕ ವ್ಯಸನ ಜಾಲ, ಸೈಬರ್ ಸ್ಪೇಸ್ ಅಕ್ರಮ ಬಳಕೆ, ವಿದೇಶಿ ಭಯೋತ್ಪಾದಕರ ಚಲನವಲನಗಳು, ರಾಜ್ಯ ಹಾಗೂ ಕೇಂದ್ರ ಗುಪ್ತಚರ ಇಲಾಖೆಯ ಸಮನ್ವಯದ ಬಗ್ಗೆ ಚರ್ಚೆಯಾಗಲಿದೆ.