ಬೆಂಗಳೂರಿನಲ್ಲಿ ಸೋಮವಾರ ಮಾಧ್ಯಮಗಳ ಜೊತೆಗೆ ಮಾತನಾಡಿದ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌ಅನ್ನ ಭಾಗ್ಯ ಕಾನೂನು ತಂದಿದ್ದು ಕಾಂಗ್ರೆಸ್‌ಎಂದು ಬಿಜೆಪಿ ನಾಯಕರ ಮಾತಿಗೆ ಆಕ್ರೋಶ ವ್ಯಕ್ತಪಡಿಸಿದರು. ಭತ್ತ ಅಕ್ಕಿ ಒಂದೇ ದಿನದಲ್ಲಿ ಬೆಳೆಯೋಕೆ ಆಗುತ್ತಾ!? ಎಂದು ಪ್ರಶ್ನಿಸಿದ ಅವರು, ಅಕ್ಕಿಕೊಡಿ ಎಂದು ಕೇಂದ್ರ ಸರ್ಕಾರವನ್ನ ಕೇಳ್ತಿದ್ದೇವೆ,ಅವ್ರು ಕೊಡ್ತಿಲ್ಲ, ಅಕ್ಕಿ ಮೋದಿ ಕೊಟ್ಟಿದ್ದು ಎಂದು ಬಸವರಾಜ ಬೊಮ್ಮಾಯಿ ಹೇಳಿದರು. ಸೋನಿಯಾ ಗಾಂಧಿ ನೇತೃತ್ವದ ಯುಪಿಎನಲ್ಲಿ ಮನಮೋಹನ್ ಸಿಂಗ್ ಅಕ್ಕಿ ಕಾನೂನು ತಂದಿದ್ದು, ಇದು ಕಾಂಗ್ರೆಸ್ ಸರ್ಕಾರದ ಯೋಜನೆ. ಹಿಂದೆ ಸಿದ್ದರಾಮಯ್ಯನವರು ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿ ಅನ್ನಭಾಗ್ಯ ಯೋಜನೆ ಘೋಷಣೆ ಮಾಡಿದರು. ಅನ್ನ ಭಾಗ್ಯ ಕಾನೂನು ತಂದಿದ್ದು ಕಾಂಗ್ರೆಸ್. 5 ಕೆಜಿ ಯಿಂದ 10 ಕೆಜಿಗೆ ಅಂತ ತಂದಿದ್ದೇವೆ ಅದನ್ನು ಕೊಡಲಿದೆ. ಇನ್ನೂ ಕೆಲವು ಕಡೆ ರಾಗಿ,ಗೋಧಿ ಕೊಡಿ ಎಂದು ಕೇಳಿದ್ದಾರೆ, ಕೇಂದ್ರ ಸರ್ಕಾರ ಅಕ್ಕಿ ಕೊಡದೇ ಇದ್ದಾಗ ವಿಧಿ ಇಲ್ಲದೇ ಬೇರೆ ಕಡೆ ಖರೀದಿ ಮಾಡಿ ಕೊಡುತ್ತೇವೆ. ಚುನಾವಣೆ ಸಂದರ್ಭದಲ್ಲಿ ನಾವು ಕೊಟ್ಟ ಮಾತುಗಳನ್ನ ಉಳಿಸಿಕೊಂಡು ಹೋಗುತ್ತೇವೆ. ಐದು ಯೋಜನೆಗಳನ್ನ ಜಾರಿಗೆ ತರುತ್ತವೆ. ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸೋತಿದೆ. ಬಿಜೆಪಿಯವರಿಗೆ ಸೋಲನ್ನು ವಿಮರ್ಶೆ ಮಾಡಿ ಒಪ್ಪಿಕೊಳ್ಳುವುದಕ್ಕೆ ಆಗುತ್ತಿಲ್ಲ.ಬಿಜೆಪಿಯವರು ಒಂದು ಕಾಳು ಕಡಿಮೆಯಾದರೂ ಪ್ರತಿಭಟನೆ ಮಾಡುವುದಾಗಿ ಹೇಳಿದ್ದಾರೆ. ಬಿಜೆಪಿಯವರು ವರ್ಷದ 365 ದಿನವೂ ಪ್ರತಿಭಟನೆ ಮಾಡಲಿ, ಅವರು ಹೋರಾಟ ಮಾಡುತ್ತಿರಬೇಕು ವಿರೋಧ ಮಾಡುತ್ತಿರಬೇಕು,ಬಿಜೆಪಿಯವರು ವಿಪಕ್ಷದಲ್ಲಿ ಕೂತಿರಬೇಕು. ನಾವು ಆಡಳಿತದಲ್ಲಿಜನರ ಸೇವೆ ಮಾಡುತ್ತಿರಬೇಕು ಎಂದು ಡಿ ಕೆ ಶಿವಕುಮಾರ್ ಹೇಳಿದರು.