ಕರ್ನಾಟಕದ ಗಡಿಯಿಂದ ಸುಮಾರು ಐದು ಕಿ.ಮೀ. ದೂರದಲ್ಲಿರುವ ಕೇರಳದ ಕಾಸರಗೋಡು ಜಿಲ್ಲೆ ಮಂಜೇಶ್ವರ ತಾಲೂಕಿನ ಕಾಟು ಕುಕ್ಕೆಯಲ್ಲಿ ಆಫ್ರಿಕನ್‌ಹಂದಿ ಜ್ವರ ಕಾಣಿಸಿಕೊಂಡಿದೆ. ಇಲ್ಲಿರುವ ಫಾರ್ಮ್‌ಗಳಲ್ಲಿ 200ಕ್ಕೂ ಅಧಿಕ ಸೋಂಕು ಬಾಧಿತ ಹಂದಿಗಳು ಸಾವಿಗೀಡಾಗಿರುವುದಾಗಿ ವರದಿ ತಿಳಿಸಿದೆ. ಇದರ ಬೆನ್ನಲ್ಲೇ10 ಕಿ.ಮೀ. ವ್ಯಾಪ್ತಿಯಲ್ಲಿ ಮೂರು ತಿಂಗಳ್ಳು ಹಂದಿ ಮಾಂಸಕ್ಕೆ ನಿಷೇಧ ಹೇರಲಾಗಿದೆ. ಈ ಕೇಂದ್ರದಿಂದ ಹಂದಿ ಸಾಗಾಟ, ಮಾರಾಟ, ಮಾಂಸ ಉತ್ಪನ್ನ ಮೊದಲಾದವುಗಳ ಮಾರಾಟ, ಸಾಗಾಟ ನಿಷೇಧಿಸಲಾಗಿದೆ. ಸುಮಾರು 500 ಕ್ಕೂ ಹೆಚ್ಚು ಹಂದಿಗಳ ಮಾರಾಣ ಹೋಮ ಮಾಡಲಾಗುತ್ತಿದೆ.