ಕೊರೊನಾ ಸಾಂಕ್ರಾಮಿಕ ಸೃಷ್ಟಿಯಾದ ಬಳಿಕ ಹಲವು ವಿಜ್ಞಾನಿಗಳು, ಮಾಧ್ಯಮಗಳು ಈ ವೈರಸ್‌ವುಹಾನ್‌ಲ್ಯಾಬ್‌ನಿಂದಲೇ ಸೋರಿಕೆಯಾಗಿದೆ ಎಂದು ಹೇಳಿದ್ದರೂ ಚೀನಾ ಎಲ್ಲವನ್ನೂ ತಿರಸ್ಕರಿಸಿತ್ತು. ಆದರೆ ಆಂಡ್ರ್ಯೂ ಹಫ್ ಅವರ ದಿ ಟ್ರೂತ್ ಎಬೌಟ್ ವುಹಾನ್ ಪುಸ್ತಕದಲ್ಲಿ ಈ ಬಗ್ಗೆ ವಿವರವಾದ ಮಾಹಿತಿ ನೀಡಿದ್ದು ಸಂಚಲನ ಸೃಷ್ಟಿಸಿದೆ. ಸಾಂಕ್ರಾಮಿಕ ರೋಗಗಳನ್ನು ಅಧ್ಯಯನ ಮಾಡುವ ನ್ಯೂಯಾರ್ಕ್ ಮೂಲದ ಲಾಭರಹಿತ ಸಂಸ್ಥೆಯಾದ ಇಕೋಹೆಲ್ತ್ ಅಲೈಯನ್ಸ್‌ನ ಮಾಜಿ ಉಪಾಧ್ಯಕ್ಷರಾಗಿರುವ ಆಂಡ್ರ್ಯೂ ಹಫ್ ಹೇಳಿಕೆ ಈಗ ಭಾರೀ ಚರ್ಚೆಗೆ ಗ್ರಾಸವಾಗಿದೆ. “ಚೀನಾ ಲ್ಯಾಬ್‌ಸರಿಯಾದ ನಿಯಂತ್ರಣ ಕ್ರಮಗಳನ್ನು ಹೊಂದಿರಲಿಲ್ಲ. ಸರಿಯಾದ ಜೈವಿಕ ಸುರಕ್ಷತೆ ಮತ್ತು ಅಪಾಯ ನಿರ್ವಹಣೆಯನ್ನು ಖಚಿತಪಡಿಸಿಕೊಳ್ಳದ ಕಾರಣ ಅಂತಿಮವಾಗಿ ವುಹಾನ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿಯಿಂದ ವೈರಸ್‌ಸೋರಿಕೆಯಾಯಿತು. ಇದು ದೇಶಿಯವಾಗಿ ರೂಪುಗೊಂಡ ರೋಗದ ತಳಿ ಎನ್ನುವುದು ಚೀನಾಕ್ಕೆ ಮೊದಲ ದಿನದಿಂದಲೇ ತಿಳಿದಿತ್ತು” ಚೀನಾ ನಡೆಸುತ್ತಿದ್ದ ವೈರಸ್‌ಸಂಶೋಧನೆಗೆ ಅಮೆರಿಕ ಧನ ಸಹಾಯ ನೀಡಿತ್ತು.