ಕೊರೊನಾ ಹೊಸ ರೂಪಾಂತರಿ BF.7 ತಳಿ ಪತ್ತೆ ಬೆನ್ನಲ್ಲೇ ಖಾಸಗಿ ಆಸ್ಪತ್ರೆಗಳು ಆ್ಯಕ್ಟಿವ್ ಆಗಿದ್ದು ಸರ್ಕಾರ ಖಾಸಗಿ ಆಸ್ಪತ್ರೆಗಳು ಕೊರೊನಾ ರೋಗಿಗಳಿಗಾಗಿ ಬೆಡ್ ಮೀಸಲಿಡುವಂತೆ ಮನವಿ ಮಾಡಿಕೊಂಡಿದೆ. ಕೋವಿಡ್‍ನ ಮೊದಲ ಮೂರು ಅಲೆ ವೇಳೆ ಸರ್ಕಾರದ ಸೂಚನೆ ಮೇರೆಗೆ ಖಾಸಗಿ ಆಸ್ಪತ್ರೆಗಳು ಸೇವೆ ಒದಗಿಸಿದ್ದವು. ಈ ವೇಳೆ ಆಗಿದ್ದ ಚಿಕಿತ್ಸೆಯ ವೆಚ್ಚವನ್ನು ಸರ್ಕಾರ ಬಾಕಿ ಇರಿಸಿಕೊಂಡಿದೆ. ಸರ್ಕಾರದಿಂದ ಖಾಸಗಿ ಆಸ್ಪತ್ರೆಗಳಿಗೆ ಒಟ್ಟು 150 ಕೋಟಿ ರೂಪಾಯಿ ಪಾವತಿಯಾಗಬೇಕಾಗಿದೆ. ಸರ್ಕಾರ ಸರಿಯಾದ ಬಿಲ್ ಪಾವತಿ ಮಾಡದೇ ಇರುವುದರಿಂದ ಕೆಲ ನರ್ಸಿಂಗ್ ಹೋಂಗಳ ಆರ್ಥಿಕ ಪರಿಸ್ಥಿತಿ ಮೇಲೆ ತೀವ್ರ ಹೊಡೆತ ಬಿದ್ದಿದೆ. ಈ ಹಿಂದೆ ಸರ್ಕಾರದ ಮೇಲಿನ ಭರವಸೆ ಹಾಗೂ ಒಪ್ಪಂದದಿಂದಾಗಿ ಖಾಸಗಿ ಆಸ್ಪತ್ರೆಗಳು ವೈದ್ಯಕ್ಯೀ ಸೌಲಭ್ಯ ನೀಡಿದ್ದವು. ಸರ್ಕಾರವೇ ಉಳಿಸಿಕೊಂಡಿರುವ ಬಾಕಿ ಬರೋದು ಯಾವಾಗ? ಕೂಡಲೇ ಬಿಲ್ ಕ್ಲಿಯರ್ ಮಾಡಿ ಎಂದು ಪಟ್ಟು ಹಿಡಿದಿದೆ