ಮಹಾರಾಜ ರಂಜಿತ್ ಸಿಂಗ್ ಅವರು ತಮ್ಮ ಇಚ್ಛೆಯ ಮೇರೆಗೆ ಕೊಹಿನೂರ್ ವಜ್ರವನ್ನು ಪುರಿ ಜಗನ್ನಾಥ ದೇವರಿಗೆ ಇದನ್ನು ದಾನ ಮಾಡಿದ್ದಾರೆ. ಅದನ್ನು ಭಾರತಕ್ಕೆ ತಂದು ಪ್ರಸಿದ್ಧ ಪುರಿ ಜಗನ್ನಾಥ ದೇವಸ್ಥಾನಕ್ಕೆ ನೀಡಬೇಕು. ಕೊಹಿನೂರ್ ವಜ್ರವನ್ನು ಮರಳಿ ತರುವ ಪ್ರಕ್ರಿಯೆಯನ್ನು ಸುಗಮಗೊಳಿಸಲು ಕ್ರಮಕೈಗೊಳ್ಳುವಂತೆ ನಮ್ಮ ಪ್ರಧಾನಿಯನ್ನು ವಿನಂತಿಸಿಕೊಳ್ಳಿ ಎಂದು ಸೇನೆಯ ಸಂಚಾಲಕ ಪ್ರಿಯಾ ದರ್ಶನ್ ಪಟ್ನಾಯಕ್ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮಧ್ಯಸ್ಥಿಕೆಯನ್ನು ವಹಿಸಬೇಕು ಎಂದು ಜ್ಞಾಪಕ ಪತ್ರದಲ್ಲಿ ತಿಳಿಸಿದ್ದಾರೆ.