“ಸಿದ್ದರಾಮಯ್ಯ ಜೆಡಿಎಸ್ ಅನ್ನು ಬಿಜೆಪಿ ʼಬಿʼ ಟೀಂ ಅಂತಾ ಹೇಳಿ ಹೇಳಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿಲ್ಲ. ನಾವೂ ಅಧಿಕಾರಕ್ಕೆ ಬರಲಿಲ್ಲ” ಎಂಬ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ ಕೋಮುವಾದಿ ಬಿಜೆಪಿ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬರೋದಕ್ಕೆ ಜೆಡಿಎಸ್ ಕಾರಣ. ಯಡಿಯೂರಪ್ಪ ಜೊತೆಗೆ ಸರ್ಕಾರ ಮಾಡಿದ್ದು 20 ತಿಂಗಳು ಸಿಎಂ ಆಗಿದ್ದು ಯಾರು? 20 ತಿಂಗಳು ಯಡಿಯೂರಪ್ಪಗೆ ಸಿಎಂ ಸ್ಥಾನ ಕೊಡದೆ ಮೋಸ ಮಾಡಿದ್ದು ಯಾರು? ಇದೇ ಮಿಸ್ಟರ್ ಕುಮಾರಸ್ವಾಮಿ ಕಾರಣ ಎಂದು ಟೀಕಾಪ್ರಹಾರ ನಡೆಸಿದ್ದಾರೆ