ಅತೀ ವಿಳಂಬ ಕಾಮಗಾರಿ ಪಟ್ಟಿಯಲ್ಲಿ ಕುಖ್ಯಾತಿ ಪಡೆದ ಕೋರಮಂಗಲದ ಈಜಿಪುರ 2.5 ಕಿ.ಮೀ. ಉದ್ದದ ಮೇಲ್ಸೇತುವೆ ಕಾಮಗಾರಿ ಪೂರ್ಣಗೊಳಿಸಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ರೂ. 144 ಕೋಟಿ ಮೌಲ್ಯದ ಟೆಂಡರ್ ಕರೆದಿದೆ. ರಾಜ್ಯ ಸರ್ಕಾರ ಮಾರ್ಚ್ 2022 ರಲ್ಲಿ ಕರ್ನಾಟಕ ಹೈಕೋರ್ಟ್‌ನ ನಿರ್ದೇಶನದಂತೆ ಕೋರಮಂಗಲದ ಈಜಿಪುರ ಮುಖ್ಯ ರಸ್ತೆ ಮತ್ತು ಕೇಂದ್ರೀಯ ಸದನ್ ನಡುವೆ ಮೇಲ್ಸೇತುವೆ ನಿರ್ಮಾಣಕ್ಕಾಗಿ ಸಿಂಪ್ಲೆಕ್ಸ್ ಇನ್‌ಫ್ರಾಸ್ಟ್ರಕ್ಚರ್ ಲಿಮಿಟೆಡ್‌ಗೆ ನೀಡಲಾಗಿದ್ದ ಟೆಂಡರ್ ರದ್ದುಗೊಳಿಸಿತ್ತು. ಯೋಜನಾ ಸಲಹೆಗಾರರು ಮತ್ತು ಕಂಪನಿಯ ಎಂಜಿನಿಯರ್‌ಗಳು ಜಂಟಿ ಈವರೆಗೆ ನಡೆದ ಕಾಮಗಾರಿಯ ಅಳತೆ ಮತ್ತು ಮೌಲ್ಯಮಾಪನ ಮಾಡಲಾಗಿದೆ. ನಂತರವೇ ಹೊಸ ಟೆಂಡರ್ ಆಹ್ವಾನಿಸಲಾಗಿದೆ. ಬಾಕಿ ಉಳಿದ ಕಾಮಗಾರಿಯನ್ನು ಟೆಂಡರ್‌ನಲ್ಲಿ ಪಾಲ್ಗೊಳ್ಳಲಿರುವ ಹೊಸ ಕಂಪನಿ ಮಾರ್ಚ್ 2023 ರ ವೇಳೆಗೆ ಫ್ಲೈಓವರ್ ಸಿದ್ಧಗೊಳಿಸಬೇಕಿದೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.ಇದರಿಂದ ಸ್ಥಳೀಯ ಶಾಸಕ ಹಾಗೂ ಮಾಜಿ ಸಚಿವ ರಾಮಲಿಂಗಾ ರೆಡ್ಡಿ ಸ್ಥಳೀಯ ನಿವಾಸಿಗಳೊಂದಿಗೆ ಪ್ರತಿಭಟನೆ ನಡೆಸಿದ್ದರು. ಅಪೂರ್ಣ ಕಾಮಗಾರಿಯಿಂದ ಈ ಭಾಗದ ಜನರು, ವಾಹನ ಸವಾರರು ಹೈರಾಣಾಗಿದ್ದಾರೆ.